ಜಿಲ್ಲೆ

ಬೆಳಗಾವಿ ನಗರದಲ್ಲಿ ಯುವಕ ಆತ್ಮಹತ್ಯೆ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಇಲ್ಲಿನ ಕಪಿಲೇಶ್ವರ ಮಂದಿರದ ಹಿಂದಿನ ಪೂಜಾರಿಯೊಬ್ಬರ ಪುತ್ರ, ತಾಂಗಡಿ ಗಲ್ಲಿಯ ನಿವಾಸಿ ಸಿದ್ಧಾರ್ಥ ಪೂಜಾರಿ(24) ಬುಧವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಹಿಂದೆ ಅರ್ಚಕರಾಗಿದ್ದ ರಾಮಾ ಅವರ ಪುತ್ರ ಸಿದ್ದಾರ್ಥ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಖಡೇಬಜಾರ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಕಪಿಲೇಶ್ವರ ದೇವಸ್ಥಾನದವರು ನನ್ನ ಮೇಲೆ ಸುಳ್ಳು ಆಪಾದನೆ ಮಾಡಿದ್ದಾರೆ. ನಾನು ಯಾವುದೇ ಹುಡುಗಿಗಾಗಿ ಸಾಯುತ್ತಿಲ್ಲ. ಬದಲಿಗೆ ಐಷಾರಾಮಿ ಜೀವನ ನಡೆಸಲು ಆಗದೆ ಸಾಯುತ್ತಿದ್ದೇನೆ’ ಎಂದು ಅದರಲ್ಲಿ ಬರೆದಿದ್ದಾರೆ. ತನಿಖೆ ಮಾಡುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.