ಜಿಲ್ಲೆ

3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ:ಮದುವೆ ಮನೆಯಲ್ಲಿ ಚಿನ್ನಾಭರಣ ಕದ್ದುಕೊಂಡು ಹೋಗಿದ್ದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ವೀರಭದ್ರನಗರಇಮ್ತಿಯಾಜ್ ಮಹಮ್ಮದ್ ಗೌಸ್ ಹುಬ್ಳಿವಾಲೆ -(63) ಬಂಧಿತ ವ್ಯಕ್ತಿ.
ಮಾಳಮಾರುತಿ ಠಾಣಾ ವ್ಯಾಪ್ತಿಯ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ ಪಂಚಾಕ್ಷರಿ ಎಂ ಕೆ ಸಾ. ದಾವಣಗೆರೆ  ಇವರ ಹೆಂಡತಿಯ ವೆನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 3,51,000 ಮೌಲ್ಯದ ಬಂಗಾರದ ಆಭರಣ ಹಾಗೂ 3500ಹಣ ಹೀಗೆ ಒಟ್ಟು 3,54, 500 ಗಳಷ್ಟು ವಸ್ತುಗಳನ್ನು ವೆನಿಟಿ ಬ್ಯಾಗ ಸಮೇತ ಕಳುವು ಮಾಡಿಕೊಂಡು ಹೋಗಿದ್ದ ಆರೋಪಿತನನ್ನು ಮಾಳಮಾರುತಿ ಪೊಲೀಸ್ ಠಾಣೆಯವರು ಶುಕ್ರವಾರ ಬಂಧಿಸಿದ್ದಾರೆ.