ಜಿಲ್ಲೆ

ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ!

ರೇಷ್ಮೆ ನಗರ ಡೆಸ್ಕ್

ಮಾಗಡಿ: ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ವಿರೋಧಿಗಳು ಟೀಕೆಮಾಡುತ್ತಿರಲಿ ನಾವು ಅಭಿವೃದ್ಧಿ ಮಾಡುತ್ತಿರುತ್ತೇವೆ. ಟೀಕೆಗಳು ಸತ್ತ ಮೇಲೂ ಕೆಲಸಗಳು ಉಳಿಯುತ್ತವೆ ಎಂದು ಮಾಜಿ ಶಾಸಕ ಎ.ಮಂಜುನಾಥ್​ಗೆ ಶಾಸಕ ಎಚ್​.ಸಿ.ಬಾಲಕೃಷ್ಣ ಟಾಂಗ್​ ನೀಡಿದರು.

ತಾಲೂಕಿನ ಮರಳದೇವನಪುರ ಗ್ರಾಮದಲ್ಲಿ ಶುದ್ಧಕುಡಿಯುವ ನೀರಿನ ಟಕ ಹಾಗೂ ಹಾಲು ಉತ್ಪಾದಕರ ಸಹಕಾರ ಸಂದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, 30 ವರ್ಷಗಳಿಂದ ಅನೇಕ ಮಂದಿ ನನಗೆ ಸವಾಲು ಹಾಕಿಕೊಂಡು ಬಂದಿದ್ದಾರೆ. ಸವಾಲು ಹಾಕಿದವರು ಮಾಜಿ ಶಾಸಕರಂತಿಲ್ಲ. ಸವಾಲು ಹಾಕಿದ್ದಾರೆ ಎಂದು ದುರಾಂಕಾರದಿಂದ ನಾನು ನಡೆದಿಲ್ಲ. ಜನಮೆಚ್ಚುವಂತೆ ಕೆಲಸ ಮಾಡಿಕೊಂಡು ಬಂದಿದೇವೆ. ಜನರೇ ತೀರ್ಮಾನಿಸುತ್ತಾರೆ. ಪಟ್ಟಣದ ಗಾಂಧಿನಗರ ವೃತ್ತದಲ್ಲಿ ರಸ್ತೆ ವಿಸ್ತರಣೆಗಾಗಿ ಗಾಂದೀಜಿ ಪ್ರತಿಮೆ ತೆರವುಗೊಳಿಸಲಾಗುತ್ತಿದೆ. ಈ ಬಗ್ಗೆ ಮಾಜಿ ಶಾಸಕರು ಹೇಗೆ ಮೂರ್ತಿ ಎತ್ತುತ್ತಾರೆ ಎಂದು ಸವಾಲು ಹಾಕಿದ್ದಾರೆ. ಸರ್ಕಲ್​ ಅಭಿವೃದ್ಧಿ ಬಳಿಕ ನೋಡಲಿ ಎಂದು ಸವಾಲು ಹಾಕಿದರು.

ಪಟ್ಟಣದ ಗಾಂಧಿನಗರ ವೃತ್ತವನ್ನು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ, ವೈಯಕ್ತಿಕ 35 ಲಕ್ಷ ರೂ. ವೆಚ್ಚದಲ್ಲಿ 10 ಅಡಿ ಎತ್ತರದ ಗಾಂಧಿ ಪ್ರತಿಮೆ ನಿರ್ಮಿಸಲಾಗುತ್ತಿದ್ದು, ಪ್ರತಿಮೆ ಬೇಕಾ? ಬೇಡವಾ ಎಂದು ಮಾಜಿ ಶಾಸಕರು ತಿಳಿಸಬೇಕು. ಈ ಹಿಂದಿನ ಗಾಂಧೀಜಿ ಪ್ರತಿಮೆ, ಈಗ ನಿರ್ಮಿಸಲು ಮುಂದಾಗಿರುವ ಗಾಂಧೀಜಿ ಪ್ರತಿಮೆಯನ್ನು ನೋಡಿ ಈ ಬಗ್ಗೆ ಜನ ತೀರ್ಮಾನಿಸಲಿ.

ಶಾಶ್ವತವಾದ ಕೆಲಸ ಮಾಡುತ್ತಿದ್ದೇವೆ. ವೃತ್ತದ ಬಳಿ ತಾಲೂಕು ಕಚೇರಿ ಬರುತ್ತಿದೆ. ಈಗ ಜೂನಿಯರ್​ ಕಾಲೇಜು, ಪ್ರಥಮ ದರ್ಜೆ ಕಾಲೇಜು, ತಾ.ಪಂ. ಜಿ.ಪಂ. ಕಚೇರಿ ಇರುವುದರಿಂದ ಗಾಂಧಿ ನಗರ ವೃತ್ತವನ್ನು ಸೌಂದರ್ಯಿಕರಣ ಮಾಡುವ ಉದ್ದೇಶದಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.

ಪ್ರತಿಯೊಬ್ಬರಿಗೂ ಶುದ್ಧ ನೀರು ಅಗತ್ಯವಾಗಿದ್ದು, ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಇನ್ನೆರಡು ವರ್ಷಗಳೊಳಗೆ ನೀರಿನ ಟಕಗಳನ್ನು ನಿರ್ಮಿಸಲಾಗುವುದು. ಮರಳದೇವನಪುರ ಗ್ರಾಮದವರು ಶುದ್ಧ ಕುಡಿಯುವ ನೀರು ತರಲು ಆಗಲಕೋಟೆಗೆ ತೆರಳುವಂತಾಗಿತ್ತು. ಈಗ ಗ್ರಾಮದಲ್ಲೇ ಟಕ ನಿರ್ಮಿಸಲಾಗಿದೆ. ಇನ್ನು ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್​ ರಸ್ತೆ ನಿರ್ಮಿಸಲಾಗುತ್ತಿದೆ. ರಾಮಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದು, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಬಾಲಕೃಷ್ಣ ಹೇಳಿದರು. ಬಮುಲ್​ ನಿರ್ದೇಶಕ ಎಚ್​.ಎನ್​.ಆಶೋಕ್​, ಮಾಜಿ ನಿರ್ದೇಶಕ ನರಸಿಂಹಮೂರ್ತಿ, ಜೆ.ಪಿ.ೌಂಡೇಶನ್​ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ಬಿಎಂಆರ್​ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ವಿದ್ಯಾರ್ಥಿ ಮಿತ್ರ ಕಿರಣ್​, ದೋಣಕುಪ್ಪೆ ಬಸಂತಿ, ಸೀಗೇಕುಪ್ಪೆ ಲೋಕೇಶ್​, ಚಿಕ್ಕರಾಮೇಗೌಡ, ನಾರಸೇಗೌಡ, ಕಂಬೇಗೌಡ, ಬ್ಯಾಲಯ್ಯ, ಮೂರ್ತಿ, ಗಂಗಣ್ಣ, ಶ್ರೀನಿವಾಸಯ್ಯ ಇದ್ದರು.

ಮಾಜಿ ಸಂಸದ ಡಿ.ಕೆ.ಸುರೇಶ್​ಗೆ ಕ್ರೆಡಿಟ್​ ನಾಡಪ್ರಭು ಕೆಂಪೇಗೌಡ ಕೋಟೆ ಜೀಣೋರ್ದ್ಧಾರಗೊಳಿಸಲು ಒಂದಕ್ಕೆ 103 ಕೋಟಿ ರೂ. ಮಂಜೂರಾಗಿದೆ. ಈ ಬಗ್ಗೆ ಯಾರೇ ಆಗಲಿ ತಿಳಿದುಕೊಂಡು ಮಾತನಾಡಬೇಕು. ಇದರ ಕ್ರೆಡಿಟ್​ ಮಾಜಿ ಸಂಸದ ಡಿ.ಕೆ.ಸುರೇಶ್​ ಅವರಿಗೆ ಸಲ್ಲಬೇಕು ಎಂದು ಬಾಲಕೃಷ್ಣ ಹೇಳಿದರು.
ಧರ್ಮಸ್ಥಳ ಕೇಸ್​ ತೊಟ್ಟಿಲು ತೂಗುತ್ತಿದ್ದದ್ದೂ, ಮಗುವನ್ನು ಜಿವುಟಿ, ಅಳಿಸುತ್ತಿದ್ದದ್ದೂ ಬಿಜೆಪಿ ಕಳೆದ 20 ವರ್ಷಗಳಿಂದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳ ಮೇಲೆ ಗೂಭೆ ಕೂರಿಸುವ ವ್ಯವಸ್ಥಿತ ಸಂಚುನಡೆಯುತ್ತಿತ್ತು. ಈ ಹಿಂದಿನ ಬಿಜೆಪಿ ಸರ್ಕಾರ ತನಿಖೆ ಮಾಡಿಸಿ ಪೂರ್ಣಗೊಳಿಸಬಹುದಿತ್ತು. ಆದರೆ, ಅವರು ಮಗುವನ್ನು ಜಿವುಟ್ಟುತಿದ್ದರು, ತೊಟ್ಟಿಲನ್ನು ತೂಗುತ್ತಿದ್ದರು. ಈ ಸಂಬಂಧ ತನಿಖೆ ನಡೆಸಿ ಪ್ರಕರಣಕ್ಕೆ ಇತಿಶ್ರೀ ಹಾಡಲು ನಮ್ಮ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ತನಿಖೆಗೆ ಸೂಚಿಸಿದ್ದರು. ತನಿಖೆ ನಡೆದಿದೆ. ಈ ವೇಳೆ 80ರಷ್ಟು ಏನೂ ನಡೆದಿಲ್ಲ ಎನ್ನಲಾಗಿದ್ದು, ಧರ್ಮಾಧಿಕಾರಿಗಳು, ಧರ್ಮಸ್ಥಳ, ಭಕ್ತರು ನಿರಾಳರಾಗಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.
ಇಂದು ಟೆಂಡರ್​ ಪ್ರಕ್ರಿಯೆ ವೈಜಿ ಗುಡ್ಡ ಜಲಾಶಯದಿಂದ 100 ಕೋಟಿ ರೂ. ವೆಚ್ಚದಲ್ಲಿ ಮಾಡಬಾಳ್​ ಹೋಬಳಿಯ ಚಕ್ರಭಾವಿ, ಆಗಲಕೋಟೆ, ಮಠದ ಪಾಳ್ಯ, ಕಲ್ಲುದೇವಹಳ್ಳಿ, ಬೆಳಗವಾಡಿ, ಗೆಜ್ಜಗಾರುಗುಪ್ಪೆ ಸೇರಿ ಕುಣಿಗಲ್​ ತಾಲೂಕಿನ ಹಲವಾರು ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆಗೆ ನಾಳೆ(ಜು.25) ಟೆಂಡರ್​ ನಡೆಯಲಿದ್ದು, ಟೆಂಡರ್​ ಪೂರ್ಣಗೊಂಡ ನಂತರ ಚಕ್ರಭಾವಿ ಗ್ರಾಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಿಂದ ಭೂಮಿಪೂಜೆ ನೆರವೇರಿಸಲಾಗುವುದು. ನೀರಾವರಿ ಯೋಜನೆಗಳು ಡಿ.ಕೆ.ಸುರೇಶ್​ ಅವರ ಶ್ರಮದ ಲ ಎಂದು ಬಾಲಕೃಷ್ಣ ಹೇಳಿದರು.