ಶಾಸಕ ಟಿ.ಎಸ್.ಶ್ರೀವತ್ಸ 
ಜಿಲ್ಲೆ

ಸಂವಿಧಾನ ಹೆಸರಿನಲ್ಲಿ ಬಿಜೆಪಿ ವಿರುದ್ಧ ಟೀಕೆ : ರಾಜ್ಯ ಸರ್ಕಾರದ ವಿರುದ್ಧ ಶಾಸಕ ಶ್ರೀವತ್ಸ ಆಕ್ರೋಶ

ಮೈಸೂರು : ಸಂವಿಧಾನದ ಬಗ್ಗೆ ಸಂದೇಶ ಕೊಡುತ್ತೇವೆ ಎಂದು ಹೇಳಿ ನಗರದಲ್ಲಿ ಸಂವಿಧಾನ ದಿನ ನಡೆಸಿದ ರಾಜ್ಯ ಸರ್ಕಾರ ಉತ್ತಮ ಸಂದೇಶ ನೀಡುವ ಬದಲು ಬಿಜೆಪಿಯನ್ನು ಟೀಕಿಸಲು ವೇದಿಕೆ ಬಳಕೆ ಮಾಡಿಕೊಂಡಿದ್ದು ಸರಿಯಲ್ಲ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಯಾವ ರೀತಿಯ ಸಂದೇಶ ಕೊಟ್ಟರು ಅಂತ ನಾವೆಲ್ಲ ನೋಡಿದ್ದೇವೆ. ಸರ್ಕಾರದ ಕಾರ್ಯಕ್ರಮಕ್ಕೆ ಎಲ್ಲ ಪಕ್ಷದವರನ್ನು ಆಹ್ವಾನಿಸಿ ನಂತರ ಬಿಜೆಪಿ ಪಕ್ಷವನ್ನು ಟೀಕೆ ಮಾಡಿದರು. ಆ ರೀತಿಯ ಉದ್ದೇಶ ಇದ್ದರೆ ಕಾಂಗ್ರೆಸ್ ಬ್ಯಾನರ್‌ನಲ್ಲಿ ಸಂವಿಧಾನ ದಿನಾಚರಣೆ ಮಾಡಬೇಕಿತ್ತು. ಸರ್ಕಾರದ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಮೇಲೆ ಎಲ್ಲರಿಗೂ ಗೌರವ ಕೊಡಬೇಕು ಎಂದರು.

ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಹೆಸರು ಉಪಯೋಗಿಸಿಕೊಂಡು ವೋಟ್ ಬ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಂವಿಧಾನ ದಿನ ಕಾರ್ಯಕ್ರಮದಿಂದ ಯಾವ ಪುರುಷಾರ್ಥ ಸಾಸಿದರು? ಕೇಂದ್ರ ಸರ್ಕಾರ ಸಂವಿಧಾನದ ಕುರಿತು ಸಂಸತ್‌ನಲ್ಲಿ 2 ದಿನ ವಿಶೇಷ ಅವೇಶನ ನಡೆಸಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲೂ 2 ದಿನ ವಿಶೇಷ ಅವೇಶನ ನಡೆಸಿ ಸಂವಿಧಾನದ ಮಹತ್ವ ತಿಳಿಸುವ ಕಾರ್ಯ ಮಾಡಿದರು. ಆದರೆ, ರಾಜ್ಯ ಸರ್ಕಾರ ನಗರದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಸಂವಿಧಾನದ ಕುರಿತು ಚರ್ಚೆ ನಡೆಸದೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ಸೀಮಿತವಾಯಿತು. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದರು.

ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂವಿಧಾನ ದಿನ ಕಾರ್ಯಕ್ರಮ ನಡೆಸಲಾಗಿದೆ. 14 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಅದರಲ್ಲಿ 4 ಕೋಟಿ ರೂ.ಗಳನ್ನು ವೇದಿಕೆ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಇವರಿಗೆ ಮಾಸಾಶನ ನೀಡಲು ಹಣ ಇಲ್ಲ, ಅಂಗವಿಕಲರಿಗೆ ಉಚಿತ ಬಸ್‌ಪಾಸ್ ನೀಡಲು ಆಗುತ್ತಿಲ್ಲ. ಎಲ್ಲ ಯೋಜನೆಗಳನ್ನು ಕಳೆದ 7 ತಿಂಗಳಿನಿಂದ ನಿಲ್ಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಹುತೇಕ ಜನರಿಗೆ ಕಾರ್ಯಕ್ರಮದ ಕುರಿತು ಮಾಹಿತಿಯೇ ಇಲ್ಲ. ಮುಗ್ಧ ಜನರನ್ನು ಕರೆದುಕೊಂಡು ಬಂದು ಅವರಿಗೆ ತೊಂದರೆ ಕೊಟ್ಟರು ಎಂದು ಟೀಕಿಸಿದರು.

ಆಶಾ ಕಾರ್ಯಕರ್ತೆಯರ ಬಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಮುಖ್ಯಮಂತ್ರಿ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಆದರೆ, ಎಷ್ಟು ವೇತನ ಏರಿಕೆ ಮಾಡುತ್ತೇವೆ ಎಂದು ಘೋಷಣೆ ಮಾಡಿಲ್ಲ. ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸರ್ಕಾರ ಇನ್ನಾದರೂ ಸ್ಪಂದಿಸಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.