ಮದ್ದೂರು ತಾಲೂಕಿನ ಚುಂಚೇಗೌಡನದೊಡ್ಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟೆ ಆಂಜನೇಯಸ್ವಾಮಿ ದೇಗುಲದಲ್ಲಿ ದೇವರ ಮೂರ್ತಿಗೆ ವಿಶೇಷವಾಗಿ ಬೆಣ್ಣೆ ಅಲಂಕಾರ ಮಾಡಲಾಗಿತ್ತು. 
ಜಿಲ್ಲೆ

ಕಟ್ಟೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ

ಮದ್ದೂರು: ತಾಲೂಕಿನ ಚುಂಚೇಗೌಡನದೊಡ್ಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟೆ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಗುರುವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು.

ದೇವರಿಗೆ ಬೆಣ್ಣೆ ಅಲಂಕಾರ ಮಾಡಿ ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. 48 ದಿನಗಳ ವಿಶೇಷ ಪೂಜಾ ಕಾರ್ಯಕ್ರಮದ ಅಂಗವಾಗಿ ಪ್ರತಿನಿತ್ಯ ವಿಶೇಷ ಧಾರ್ಮಿಕ ಪೂಜಾ ಕೈಂರ್ಯಗಳು ಜರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ನೂರಾರು ಭಕ್ತರಿಗೆ ಅನ್ನಸಂರ್ಪಣೆ ಏರ್ಪಡಿಲಾಗಿತ್ತು. ಜತೆಗೆ ದೇಗುಲವನ್ನು ತಳಿರು-ತೋರಣಗಳಿಂದ ಹಾಗೂ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.

ಸೇವಾಕರ್ತರಾದ ಬಿ.ಆರ್.ಪ್ರಸನ್ನಕುಮಾರ್, ಚೈತ್ರಾ, ಬಿ.ಎಲ್.ನಾಗರಾಜು, ವಿಜಯಾ, ಸಿ.ಎಂ.ನಾಗರಾಜು, ಜ್ಯೋತಿ, ಪ್ರಭಾವತಿ ಉಮೇಶ, ಜಿ.ಕೆ.ಬೇಕರಿ ಗೋವಿಂದು ಅವರು ವಿಶೇಷ ಪೂಜಾ ಸೇವಾ ಕಾರ್ಯಗಳನ್ನು ನಡೆಸಿಕೊಟ್ಟರು. ಅರ್ಚಕ ಮದನ್‌ಕುಮಾರ್ ಇದ್ದರು.