ಜಿಲ್ಲೆ

ಅನೈತಿಕ ಸಂಬಂಧ ಶಂಕೆ : ಮೈಸೂರಿನಲ್ಲಿ ವ್ಯಕ್ತಿಯ ಹತ್ಯೆ

ಸದೇಶ್ ಕಾರ್ಮಾಡ್

ಮೈಸೂರು: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಅನುಮಾನದ ಮೇರೆಗೆ ವ್ಯಕ್ತಿಯೊಬ್ಬರನ್ನು ಶನಿವಾರ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ತಾಲೂಕಿನ ಸರ್ಕಾರಿ ಉತ್ತನಹಳ್ಳಿ ನಿವಾಸಿ ರಾಮಣ್ಣ (45) ಹತ್ಯೆಗೀಡಾದ ವ್ಯಕ್ತಿ. ಆರೋಪಿ, ಲಾಲ್‌ಬಹದ್ದೂರ್ ಶಾಸ್ತ್ರಿ ನಗರದ ನಿವಾಸಿ ಶಿವರುದ್ರನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಿವರುದ್ರ ಮತ್ತು ರಾಮಣ್ಣ ಕ್ರಮವಾಗಿ ಅಕ್ಕ ಮತ್ತು ತಂಗಿಯನ್ನು ವಿವಾಹವಾಗಿದ್ದಾರೆ. ತನ್ನ ಪತ್ನಿಯೊಂದಿಗೆ ರಾಮಣ್ಣ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಮೇರೆಗೆ ಶಿವರುದ್ರ ಹತ್ಯೆ ಮಾಡಿದ್ದಾನೆ.

ರಾಮಣ್ಣ ಗಾರೆ ಕೆಲಸಗಾರರಾಗಿದ್ದು, ಶಿವರುದ್ರ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದಾನೆ. ಶನಿವಾರ ಕಾಕರವಾಡಿಯ ಉಸ್ಮಾನಿಯಾ ರಸ್ತೆಯಲ್ಲಿ ಕಟ್ಟಡ ಕೆಲಸಕ್ಕೆ ರಾಮಣ್ಣ ಆಗಮಿಸಿದ ಸಂದರ್ಭ ಶಿವರುದ್ರ ಜಗಳ ತೆಗೆದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.