ಜಿಲ್ಲೆ

ಲೋಕಾಯುಕ್ತ ಬಲೆಗೆ ಬಿದ್ದ ತಿ.ನರಸೀಪುರ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ

ಮೈಸೂರು: ಲಂಚ ಪಡೆಯುತ್ತಿದ್ದ ಸಂದರ್ಭ ತಿ.ನರಸೀಪುರ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವೇಣುಗೋಪಾಲ್ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಿವೇಶನವನ್ನು ಅನ್ಯಕ್ರಾಂತ ಮಾಡಿಕೊಡಲು 10 ಸಾವಿರ ರೂ.ಗಳನ್ನು ಸ್ಥಳೀಯ ನಿವಾಸಿ ಲಿಂಗರಾಜು ಅವರಿಂದ ಲಂಚವಾಗಿ ಪಡೆಯುತ್ತಿದ್ದ ವೇಳೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ವೇಣುಗೋಪಾಲ್‌ರನ್ನು ವಶಕ್ಕೆ ಪಡೆದರು. ಅನ್ಯಕ್ರಾಂತ ಮಾಡಿಕೊಡಲು ಲಂಚ ನೀಡಬೇಕು ಎಂದು ವೇಣುಗೋಪಾಲ್ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಲಿಂಗರಾಜು ಲೋಕಾಯುಕ್ತಗೆ ದೂರು ನೀಡಿದ್ದರು.

ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೈಸೂರು ಇನ್ಸ್‌ಪೆಕ್ಟರ್ ಜಯರತ್ನ, ಮಡಿಕೇರಿ ಇನ್ಸ್‌ಪೆಕ್ಟರ್ ಲೋಕೇಶ್, ಸಿಬ್ಬಂದಿ ಗೋಪಿ, ರಮೇಶ್, ಲೋಕೇಶ್, ಮಂಜುನಾಥ್, ಪ್ರಕಾಶ್, ಸಲಾವುದ್ದೀನ್, ಲೋಹಿತ್, ಪ್ರವೀಣ್ ಕುಮಾರ್, ಶಶಿಕುಮಾರ್, ಚಾಲಕರಾದ ನಾಗೇಂದ್ರ, ಲೋಕೇಶ್ ಇದ್ದರು.