ಜಿಲ್ಲೆ

ಮೈಸೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಮೂವರ ಬಂಧನ

Mysuru

ಮೈಸೂರು: ನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳವಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಮಾಬಾಯಿನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನೂರಾನಿ, ಗೀತಾ ಹಾಗೂ ರಾಮಣ್ಣ ಬಂಧಿತರು. ಇಬ್ಬರು ಗ್ರಾಹಕರನ್ನು ವಶಕ್ಕೆ ಪಡೆಯಲಾಗಿದೆ. ವೇಶ್ಯಾವಾಟಿಕೆಯಿಂದ ರಕ್ಷಿಸಲ್ಪಟ್ಟ ಮಹಿಳೆಯನ್ನು ಸ್ತ್ರೀ ಸೇವಾನಿಕೇತನ ಸ್ವಯಂ ಸೇವಾ ಸಂಸ್ಥೆಗೆ ಆಶ್ರಯಕ್ಕಾಗಿ ಕಳುಹಿಸಲಾಗಿದೆ.

ಮೈಸೂರು ಗ್ರಾಮಾಂತರ ಉಪವಿಭಾಗದ ಎಸಿಪಿ ಎಂ.ಎಸ್. ಪೂರ್ಣಚಂದ್ರ ತೇಜಸ್ವಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ವಿ.ಡಿ.ಮಮತ, ಮಾನವ ಕಳ್ಳ ಸಾಗಾಣಿಕೆ ಘಟಕದ ಪಿಎಸ್‌ಐ ಯಾಸ್ಮಿನ್ ತಾಜ್, ಸಿಬ್ಬಂದಿ ಹರೀಶ್ ಕುಮಾರ್, ಎ. ದಾಕ್ಷಾಯಿಣಿ, ರಾಮ್ ಪ್ರಸಾದ್, ಚಾಲಕರಾದ ಚಿಕ್ಕಲಿಂಗಯ್ಯ ಪಾಲ್ಗೊಂಡಿದ್ದರು.