ಜಿಲ್ಲೆ

ಕಲಬುರಗಿ ನಗರದಲ್ಲಿ ಹಲ್ಲೆ, ದರೋಡೆ, ಲೂಟಿ

ರಮೇಶ ಮೇಳಕುಂದಾ

ಕಲಬುರಗಿ: ನಗರದ ಸೂಪರ್​ ಮಾರ್ಕೆಟ್​ನಲ್ಲಿ ವ್ಯಕ್ತಿಯೊಬ್ಬನನ್ನು ತಡೆದ ಮೊಬೈಲ್​, ಬೆಳ್ಳಿ ಚೈನ್​ ದೋಚಿದ್ದು, ಶಹಾಬಾದ್​ ರಸ್ತೆಯಲ್ಲಿರುವ ಅಂಭಾ ಭವಾನಿ ದೇವಸ್ಥಾನಕ್ಕೆ ಸ್ನೇಹಿತೆ ಜತೆಗಿದ್ದ ವ್ಯಕ್ತಿಯನ್ನು ಬೆದರಿಸಿ ಬಂಗಾರದ ಚೈನ್​, 25 ಸಾವಿರ ರೂ. ದರೋಡೆ ಮಾಡಿದ ಟನೆ ನಡೆದಿದ್ದು, ಮತ್ತೊಂದೆಡೆ ಪೆಟ್ರೋಲ್​ ಪಂಪ್​ನಲ್ಲಿ ಕೆಲಸಗಾರನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ ಪ್ರತ್ಯೇಕ ಟನೆಗಳು ನಡೆದಿವೆ.

ಬ್ರಹ್ಮಪುರ ಠಾಣೆ ವ್ಯಾಪ್ತಿಯ ಸೂಪರ್​ ಮಾರ್ಕೆಟ್​ ಬಸ್​ಸ್ಟಾಂಡ್​ ಛಾವಣಿ ಮೇಳೆ ಹೋಗಿದ್ದ ತಯ್ಯಾಬ್​ ಮೈಬೂಬ್​ಸಾಬ್​ನನ್ನು ತಡೆದ ನಾಲ್ವರು ಅಪರಿಚಿತರು ಚಾಕುವಿನಿಂದ ಹಲ್ಲೆ ಮಾಡಿ, ಆತನ ಬಳಿ ಇದ್ದ ಮೊಬೈಲ್​ ೋನ್​, ಮೂರು ತೊಲಿ ಬೆಳ್ಳಿ ಚೈನ್​ ದರೋಡೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಸಬ್​ ಅರ್ಬನ್​ ಠಾಣೆ ವ್ಯಾಪ್ತಿಯ ವಿಶ್ವಾರಾಧ್ಯ ದೇವಸ್ಥಾನದ ಬಳಿಯ ಪೆಟ್ರೋಲ್​ ಪಂಪ್​ನ ಕೆಲಸಗಾರನ ಮೇಲೆ ಹಲ್ಲೆ ಮಾಡಲಾಗಿದೆ. ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ತ್ರಿಶೂಲ್​ನ ಮೇಲೆ ಆರೇಳು ಜನರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಹಲ್ಲೆ ದೃಶ್ಯ ಬಂಕ್​ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಬ್​ ಅರ್ಬನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ ನಗರದ ಶಹಾಬಾದ್​ ರಸ್ತೆಯ ಅಂಬಾಭವಾನಿ ದೇವಸ್ಥಾನಕ್ಕೆ ಸ್ನೇಹಿತ ಜತೆಗೆ ಕಾರ್​ನಲ್ಲಿ ಬಂದಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿ, ದರೋಡೆ ಮಾಡಲಾಗಿದೆ. ಬೀದರ್​ ಜಿಲ್ಲೆ ಚಿಟಗುಪ್ಪದ ಅಮರ ಹಸರಗುಂಡಿ ದರೋಡೆಗೆ ಒಳಗಾದವರು. ಶನಿವಾರ ಸ್ನೇಹಿತೆ ಜತೆಗೆ ಕಾರ್​ನಲ್ಲಿ ಶಹಾಬಾದ್​ ರಸ್ತೆಯಲ್ಲಿರುವ ದಾಬಾವೊಂದರಲ್ಲಿ ಊಟ ಮಾಡಿ, ಅಂಬಾ ಭವಾನಿ ದೇವಸ್ಥಾನಕ್ಕೆ ಹೋಗಿದ್ದಾಗ, ಬೈಕ್​ ಮೇಲೆ ಮೂವರು ಅಪರಿಚಿತರು ಚಾಕು ತೋರಿಸಿ, ಅಮರ ಬಳಿ ಇದ್ದ ಒಂದು ತೊಲೆಯ, ಅರ್ದ ತೊಲೆಯ ಲಾಕಿಟ್​, 25 ಸಾವಿರ ರೂ. ದೋಚಿಕೊಂಡು ಹೋಗಿದ್ದಾರೆ. ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.