ಜಿಲ್ಲೆ

ಬ್ಯಾಟರಿ ಕಳ್ಳರನ್ನು ಬಂಧಿಸಿದ ಹಾರೂಗೇರಿ ಠಾಣೆ ಪೊಲೀಸರು

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ಜಿಲ್ಲೆಯಲ್ಲಿ  ವಾಹನಗಳ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂದಸಿದಂತೆ ಶನಿವಾರ ಹಾರೂಗೇರಿ ಠಾಣೆ ಪೊಲೀಸರು ಮೂವರನ್ನು ಬಂಽಸಿ ೧.೩೮ ಲಕ್ಷ ರೂ. ಮೌಲ್ಯದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್‌ನಲ್ಲಿ   ಶನಿವಾರ ಮೊಹರಂ ಬಂದೋಬಸ್ತ್ ಮತ್ತು ಪ್ಯಾಟ್ರೋಲಿಂಗ್ ವೇಳೆ ವಾಹನ ತಪಾಸಣೆ ಸಂದರ್ಭದಲ್ಲಿ  ೧೨ ಹಳೆ ಬ್ಯಾಟರಿಗಳನ್ನು ಸಾಗಿಸುತ್ತಿರುವ ಪತ್ತೆಯಾಗಿದೆ. ಈ ವೇಳೆ ವಾಹನ ಚಾಲಕ ಸೇರಿದಂತೆ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಬ್ಯಾಟರಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಮೂವರನ್ನು ಬಂಽಸಿ ಅವರ ಬಳಿಯಿದ್ದ  ೧೨ ಬ್ಯಾಟರಿಗಳನ್ನು ಮತ್ತು ಕಳ್ಳತನಕ್ಕೆ  ಉಪಯೋಗಿಸಿದ್ದ  ೨ ಲಕ್ಷ ರೂ. ಮೌಲ್ಯದ ಟಾಟಾ ಎಸಿಇ ಮಿನಿ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.