ಬೆಳಗಾವಿ; ಜಿಲ್ಲೆಯಲ್ಲಿ ವಿವಿಧ ಕಡೆ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಗೋಕಾಕ ಠಾಣೆ ಪೊಲೀಸರು ಗುರುವಾರ ಎಂಟು ಜನ ಅಂತಾರಾಜ್ಯ ಕಳ್ಳರನ್ನು ಬಂಽಸಿ ೫೫.೬೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟç ಕೊಲ್ಲಾಫುರ ಜಿಲ್ಲೆಯ ಗಡಹಿಂಗ್ಲೆಜ್ ತಾಲೂಕಿನ ಹಲಕರ್ಣಿ ಗ್ರಾಮದ ಅಜಿತ ಶಿವರಾಯಿ ದನಗರ, ಬೆಂಗಳೂರು ನಾರಾಯಣಪುರದ ನಾಗಭೂಷಣ ಆಂಜನಪ್ಪ, ಚನ್ನಸಂದ್ರದ ರವಿಕುಮಾರ ನಾಯ್ಡು, ಲಕ್ಷ÷್ಮಣರಾಮ್ ತೇಜರಾಮ್, ಬೆಳಗಾವಿ ಶಹಾಪುರದ ಕೃಷ್ಣಾ ಶೇಠ್, ಮುಂಡಗೋಡದ ರಾಮಚಂದ್ರ ರಾಯ್ಕರ, ಮಂಜುನಾಥ ರಾಯ್ಕರ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಜಮನಳ್ಳಿ ಗ್ರಾಮದ ಲಿಂಗರಾಜು ರಾಮೇಗೌಡ ಬಂಽತ ಆಪಾದಿತರು.
೨೦೨೨ ನವಂಬರ್ ೧೧ರಂದು ಗೋಕಾಕ ವಿವೇಕಾನಂದ ನಗರದ ಪ್ರಕಾಶ ಲಕ್ಷ÷್ಮಣ ತೋಳಿನವರ ಎಂಬುವವರ ಮನೆ, ೨೦೨೩ ಜೂನ್ ೨೩ರಂದು ಗೋಕಾಕ ತಾಲೂಕಿನ ತವಗ ಗ್ರಾಮದ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ಚಿನ್ನಾಭರಣ, ಬೆಳ್ಳಿ ಆಭರಣಗಳು ಕಳ್ಳತವಾಗಿತ್ತು. ಈ ಕುರಿತು ಗೋಕಾಕ ನಗರ ಮತ್ತು ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಈ ಪ್ರಕರಣವನ್ನು ಗಂಭೀರವಾಗಿದ್ದ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಡಾ.ಸಂಜೀವ ಪಾಟೀಲ ಅವರು ಗೋಕಾಕ ಸಿಪಿಐ ಗೋಪಾಲ್ ರಾಠೋಡ್ ನೇತೃತ್ವದ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖಾ ತಂಡವು ೨೦೨೩ ಜೂನ್ ೩೦ ರಿಂದ ಜು. ೨೪ರ ನಡುವಿನ ಅವಽಯಲ್ಲಿ ೮ ಜನರನ್ನು ಬಂಽಸಿದ್ದಾರೆ. ಅಲ್ಲದೆ, ಬಂಽತರಿAದ ೫೫,೬೦,೦೦೦ ರೂ. ಮೌಲ್ಯದ ೮೧೦ ಗ್ರಾಂ ಚಿನ್ನಾಭರಣ, ೮.೫ ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.