ಜಿಲ್ಲೆ

ಕರೆಂಟ್ ಮೋಟಾರ್ ಕಳ್ಳತನ; ನಾಲ್ವರನ್ನು ಬಂಧಿಸಿದ ಪೊಲೀಸರು

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ಮಲಪ್ರಭಾ ನದಿಯ ದಂಡೆಯಲ್ಲಿ  ಕರೆಂಟ್ ಮೋಟಾರ್ ಪಂಪಸೆಟ್‌ಗಳ ಕಳ್ಳತನ ಪ್ರಕರಣಕ್ಕೆ ಸಂಬAಽಸಿದAತೆ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿ ೫ ಲಕ್ಷ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬೈಲಹೊAಗಲ ತಾಲೂಕಿನ ಇಂಗಳ ಗ್ರಾಮದ ವ್ಯಾಪ್ತಿಯ  ಮಲಪ್ರಭಾ ನದಿಯ ದಂಡೆಯ ಜಾಕವೆಲ್ ಹತ್ತಿರ ಹೊಸೂರು ಗ್ರಾಮದ ರೈತರು ಕೂಡ್ರಿಸಿದ್ದ ಕರೆಂಟ್ ಮೋಟಾರ್ ಪಂಪಸೆಟ್‌ಗಳನ್ನು  ಕಳ್ಳತನವಾಗಿರುವ ಕುರಿತು ಮುರಗೋಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಽಸಿ ೧.೫೦ ಲಕ್ಷ ರೂ. ಮೌಲ್ಯದ ಐದು ಕರೆಂಟ್ ಮೋಟಾರ್ ಪಂಪಸೆಟ್‌ಗಳು ಹಾಗೂ ೩.೫೦ ಲಕ್ಷ ರೂ. ಮೌಲ್ಯದ ಗೂಡ್ಸ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಡಿಎಸ್‌ಪಿ ರಾಮನಗೌಡ ಹಟ್ಟಿ ನೇತೃತ್ವದ ತನಿಖಾ ತಂಡದಲ್ಲಿ   ಪಿಐ ಮೌನೇಶ್ವರ ಮಾಲಿಪಾಟೀಲ, ಪಿಎಸ್‌ಐ ಶಿವಾನಂದ ಕಾರಜೋಳ,ಐ.ಎಂ.ಹಿರೇಗೌಡ, ಸಿಬ್ಬಂದಿ ಎಂ.ಬಿ.ಸಣ್ಣನಾಯ್ಕ, ಕೆ.ಬಿ.ಅಲಗರಾವುತ, ಎಸ್.ಎಸ್.ಹುಂಜಿ, ಐ.ಎಸ್.ವಕ್ಕುಂದ, ಆರ್.ಬಿ.ಸಸಾಲಟ್ಟಿ, ಎಚ್.ಆರ್.ನ್ಯಾಮಗೌಡ ಕಾರ್ಯನಿರ್ವಹಿಸಿದ್ದರು.