ವಿಜಯವಾಣಿ ಸುದ್ದಿಜಾಲ ಅಥಣಿ
ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ತೆರಳುತ್ತಿದ್ದ ಟ್ಯಾಕ್ಟರ್ ಪಲ್ಟಿಯಾದ ಘಟನೆ ನಡೆದಿದೆ.
ದುರ್ಘಟನೆಯಲ್ಲಿ ಕಕಮರಿ ಗ್ರಾಮದ ರಾಣಿ ಉರ್ಫ್ ಕನಮಡಿ (20) ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಕಮರಿ ಗ್ರಾಮದಿಂದ ಚಿಂಚಲಿ ಗ್ರಾಮದ ಮಾಯಕ್ಕದೇವಿ ದೇವಸ್ಥಾನ ದರ್ಶನಕ್ಕೆಂದು 20 ಕ್ಕೂ ಅಧಿಕ ಭಕ್ತರಿದ್ದ ಡಬಲ್ ಟ್ರಾಲಿ ಹೊಂದಿದ್ದ ಟ್ರ್ಯಾಕ್ಟರ್ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದರೂರ ಸಮೀಪದ ಸೇತುವೆಯ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಅಥಣಿ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ ಅಕ್ಷತಾ ಕನಮಡಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
…..