ಜಿಲ್ಲೆ

ಮೊಬೈಲ್ ಫೋನ್ ಕಳ್ಳತನ ಆರೋಪಿ ಬಂಧನ

ಎ. ಆರ್. ರಘುರಾಮ

ಗೋಣಿಕೊಪ್ಪಲು : ಗೋಣಿಕೊಪ್ಪಲುವಿನ ಮುಖ್ಯ ರಸ್ತೆಯಲ್ಲಿರುವ ಮೊಬೈಲ್ ಫೋನ್ ಮಳಿಗೆ ಷಟರ್ ಮುರಿದು 32 ಮೊಬೈಲ್ ಫೋ ನ್ ಸೆಟ್ ಮತ್ತು 3,000 ರೂ. ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆ.24 ರ ತಡರಾತ್ರಿ ಹಾರ್ಮೊನಿ ಮೊಬೈಲ್ ಶಾಪ್‌ನ ಶಟರ್ ಮುರಿದು ಕಳ್ಳತನ ಮಾಡಲಾಗಿತ್ತು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಅಸ್ಸಾಂ ಮೂಲದ, ಚಿಕ್ಕಮಗಳೂರಿನಲ್ಲಿ ವಾಸವಿದ್ದ ಜೋಹುಲ್ ಆಲಿ ಎಂಬಾತನನ್ನು ಗುರುವಾರ ಬಂಧಿಸಿದ್ದಾರೆ. ಆರೋಪಿಯಿಂದ 32 ಮೊಬೈಲ್ ಫೋನ್ ಸೆಟ್ ವಶಪಡಿಸಿಕೊಳ್ಳಲಾಗಿದೆ.