ಜಿಲ್ಲೆ

ಅಪಘಾತ ಗಾಯಾಳು ಉಪನ್ಯಾಸಕಿ ಸಾವು

Dakshina Kannada

ಮಂಗಳೂರು: ಯೆಯ್ಯಡಿ ಹರಿಪದವಿನಲ್ಲಿ ಸ್ಕೂಟಿಗೆ ಆಲ್ಟೋ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಖಾಸಗಿ ನರ್ಸಿಂಗ್ ಕಾಲೇಜು ಉಪನ್ಯಾಸಕಿ ವಾಮಂಜೂರು ತೊಪಿಕಲ್ ನಿವಾಸಿ ಪ್ರಿಯಾಂಕಾ(31) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜುಲೈ 10ರಂದು ಸಾಯಂಕಾಲ ಹರಿಪದವಿನ ಮೂಲಕ ವಾಮಂಜೂರಿನತ್ತ ತಮ್ಮ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಪ್ರಿಯಾಂಕಾ ಅವರ ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಮೂಲತಃ ಕೋಟೆಕಾರು ನಿವಾಸಿಯಾಗಿದ್ದ ಅವರು, ವಾಮಂಜೂರಿನ ವಿನೋದ್‌ರಾಜ್ ಎಂಬುವರ ಪತ್ನಿ. ಉಳ್ಳಾಲ ಪಾಂಡ್ಯರಾಜ್ ಬಳ್ಳಾಲ್ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು.