ಜಿಲ್ಲೆ

ಅಪರಾಧ ಪ್ರಕರಣಗಳ ತನಿಖೆಯ ಗುಣಮಟ್ಟ ಹೆಚ್ಚಿಸಿಕೊಳ್ಳಿ : ಎಡಿಜಿಪಿ ಉಮೇಶಕುಮಾರ್ ಸೂಚನೆ

ಬೆಳಗಾವಿ : ಅಪರಾಧ ಪ್ರಕರಣಗಳ ತನಿಖೆಯ ಗುಣಮಟ್ಟ ಹೆಚ್ಚಿಸಬೇಕು, ಪ್ರಕರಣಗಳ ತನಿಖೆಗಳನ್ನು ವೇಗವಾಗಿ ಪೂರ್ಣಗೊಳಿಸುವುದರ ಜತೆಗೆ ಸಿಬ್ಬಂದಿಯ ಕಾರ್ಯಕ್ಷಮತೆಯೂ ವೃದ್ಧಿಯಾಗಬೇಕು ಎಂದು ಅಪರಾಧ ಮತ್ತು ತಾಂತ್ರಿಕ ಸೇವೆಗಳು ವಿಭಾಗದ ಎಡಿಜಿಪಿ ಉಮೇಶ ಕುಮಾರ್ ಉನ್ನತ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಡಿಜಿಪಿ ಉಮೇಶಕುಮಾರ್ ಅವರನ್ನು ಸ್ವಾಗತಿಸಲಾಯಿತು

ನಗರದಲ್ಲಿನ ಐಜಿಪಿ ಕಚೇರಿಯಲ್ಲಿ ಬುಧವಾರ  ಉತ್ತರ ವಲಯದ ಐದು ಜಿಲ್ಲಾ ಪೊಲೀಸ್ ಘಟಕ ಹಾಗೂ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಆಯುಕ್ತಾಲಯದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪ್ರಕರಣ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ್ರಕರಣಗಳನ್ನು ಅನಗತ್ಯವಾಗಿ ವಿಳಂಬ ಮಾಡಕೂಡದು. ಎಲ್ಲ ಪ್ರಕರಣಗಳಲ್ಲೂ ಅಪರಾಧಿಗಳಿಗೆ ಶಿಕ್ಷೆ ಒದಗಿಸುವ ನಿಟ್ಟಿನಲ್ಲಿ ತನಿಖಾಧಿಕಾರಿಗಳು ಆದ್ಯತೆ ನೀಡಬೇಕು ಎಂದರು.

ಸಭೆಯಲ್ಲಿ ಎಡಿಜಿಪಿ ಉಮೇಶಕುಮಾರ್ ಮಾತನಾಡಿದರು.

ಕಳ್ಳತನ, ಧರೋಡೆ, ಕೊಲೆಗಳಂಥಹ ಎಲ್ಲ ಪ್ರಕಣಗಳನ್ನೂ ಗಂಭೀರವಾಗಿ ಪರಿಣಿಸಬೇಕು. ಸಾಕ್ಷ್ಯಗಳ ಸಂಗ್ರಹಣೆಯಲ್ಲಿ ತನಿಖಾ ತಂಡದಲ್ಲಿನ ಎಲ್ಲರೂ ನೈಪುಣ್ಯತೆ ಮೆರೆಯಬೇಕು. ತನಿಖೆಗೆ ಸಂಬಂಧಿಸಿದ ಇತರ ಅಧಿಕಾರಿಗಳೊಂದಿಗೆ ಸಮ್ವಯತೆಯಿಂದ ಶ್ರಮಿಸುವಂತೆ.‌ ಎಲ್ಲ ಅಧಿಕಾರಿಗಳು  ತಮ್ಮ ವ್ಯಾಪ್ತಿಯ ಸಿಬ್ಬಂದಿಗೆ ಸೂಚಿಸಿ, ಅದರಂಥೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು. 

ಇದೇ ಸಂದರ್ಭದಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಗಳು ಬಾಕಿ ಇವೆ, ಏಕೆ ಬಾಕಿ ಇವೆ ಎಂಬ ಬಗ್ಗೆಯೂ ವಿವರವಾಗಿ ಮಾಹಿತಿ ಪಡೆದು, ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದರು.

ಸಭೆಯಲ್ಲಿ ವಿವಿಧ ಜಿಲ್ಲೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ್ ವಿಕಾಸ್, ಹು-ಧಾ ಆಯುಕ್ತ ರೇಣುಕಾ ಸುಕುಮಾರ್, ಬೆಳಗಾವಿ ಆಯುಕ್ತ ಸಿದ್ದರಾಮಪ್ಪ, ಎಸ್ಪಿಗಳಾದ ಲೋಕೇಶ ಜಗಲಾಸ್ಗರ್, ಸಂಜೀವ ಪಾಟೀಲ, ಬಿ.ಎಸ್.ನ್ಯಾಮಗೌಡ, ಆನಂದ ಕುಮಾರ್, ಜಯಪ್ರಕಾಶ ಸೇರಿದಂತೆ 35 ಡಿಎಸ್‌‍ಪಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.‌