ಜಿಲ್ಲೆ

ಅಪರಿಚಿತ ಪುರುಷ ಸಾವು

ನಾಗೇಶ ಎಸ್

ಶ್ರೀರಂಗಪಟ್ಟಣ: ತಾಲೂಕಿನ ಆರತಿಉಕ್ಕಡ ದೇವಾಲಯ ಸಮೀಪದ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಅನುಮಾನಸ್ಪದವಾಗಿ ಮೃತಪಟ್ಟಿದ್ದಾನೆ.

ಸುಮಾರು 35 ರಿಂದ 40ರ ವಯೋಮಾನದ ಅಪರಿಚಿತ, ಕಪ್ಪು ಮೈ ಬಣ್ಣ, ಕಪ್ಪು ತಲೆ ಕೂದಲು, ಕಪ್ಪು ಮೀಸೆ, ಗಡ್ಡ ಹಾಗೂ ಧೃಡಕಾಯ ಶರೀರ ಹೊಂದಿದ್ದು, ಮೈ ಮೇಲೆ ನೇರಳೆ ಬಣ್ಣದ ಅಂಗಿ ಮತ್ತು ಕಡು ನೀಲಿ ಬಣ್ಣದ ಚಡ್ಡಿ ಧರಿಸಿದ್ದಾನೆ. ಈತ ಮಂಗಳವಾರ ಆರತಿಉಕ್ಕಡ ದೇವಾಲಯಕ್ಕೆ ಆಗಮಿಸಿ ಬಳಿಕ ಮದ್ಯ ಸೇವಿಸಿಯೋ, ಹೃದಯಾಘಾತದಿಂದಲೋ ಅಥವಾ ಯಾವುದೋ ಖಾಯಿಲೆಯಿಂದ ಮಲಗಿದ್ದ ಸ್ಥಳದಲ್ಲೇ ಮೃತಪಟ್ಟಿದ್ದು, ಬುಧವಾರ ಬೆಳಗ್ಗೆ ಸ್ಥಳೀಯರಿಂದ ವಿಷಯ ತಿಳಿದುಬಂದಿದೆ.

ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿ ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತನ ಕುರಿತು ಯಾರಾದರೂ ಮಾಹಿತಿ ಹೊಂದಿದ್ದಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.