ಕಾಸರಗೋಡು: ಪಾಲಕುನ್ನು ಆರಾಟುಕಡವಿನಲ್ಲಿ 500 ರೂ. ಮುಖಬೆಲೆಯ ನಾಲ್ಕು ಕಳ್ಳನೋಟು ಚಲಾವಣೆಗೆ ಯತ್ನಿಸಿದ ಯುವಕನನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರಾಟುಕಡವು ಏರೋಲ್ ನಿವಾಸಿ ವಿನೋದ್ ಬಂಧಿತ. ಮೊಬೈಲ್ ಅಂಗಡಿಯೊಂದಕ್ಕೆ ತೆರಳಿ ಮೊಬೈಲ್ ಡಿಸ್‌ಪ್ಲೇ ದುರಸ್ತಿ ನಡೆಸಿದ ಬಳಿಕ 500 ರೂ. ಮುಖಬೆಲೆಯ ನೋಟುಗಳನ್ನು ನೀಡಿದ್ದ. ನೋಟನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಕಳ್ಳನೋಟು ಎಂದು ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಈ ನೋಟು ಬ್ಯಾಂಕ್‌ನಿಂದ ಲಭಿಸಿರುವುದಾಗಿ ಆರೋಪಿ ತಿಳಿಸಿದ್ದು, ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಕಳೆದ ಹಲವು ದಿನಗಳಿಂದ ಉದುಮ ಆಸುಪಾಸು ವ್ಯಾಪಕವಾಗಿ ಕಳ್ಳನೋಟು ಚಲಾವಣೆಯಾಗುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು.