ಬಂಟ್ವಾಳ: ಬಸ್‌ನಿಂದ ಯುವಕನೋರ್ವ ಹೊರಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ಗೋಳ್ತಮಜಲು ಬಳಿ ನಡೆದಿದೆ. ಗಾಯಾಳು ಯುವಕ ಬಿ.ಮೂಡ ಗ್ರಾಮದ ಮಯ್ಯರಬೈಲು ನಿವಾಸಿ ಎಂದು ಗೊತ್ತಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮಂಗಳೂರಿನಿಂದ ವಿಟ್ಲ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸಿನಲ್ಲಿ ಯುವಕ ಫೂಟ್‌ಬೋರ್ಡಿನಲ್ಲಿ ನಿಂತುಕೊಂಡಿದ್ದು, ಗೋಳ್ತನಜಲು ಬಳಿ ಬಸ್ ಅತಿ ವೇಗದಿಂದ ಚಲಿಸುತ್ತಿದ್ದ ವೇಳೆ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ತಲೆಗೆ ಗಾಯವಾಗಿದೆ. ಬಳಿಕ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಬೊಬ್ಬೆ ಹೊಡೆದಾಗ ಸ್ವಲ್ಪ ಮುಂದೆ ಹೋಗಿ ಬಸ್ ನಿಂತಿದೆ. ಯುವನ ತಲೆ ಹಾಗೂ ಹಣೆ ಭಾಗಕ್ಕೆ ಗಾಯವಾಗಿದೆ.