ಜಿಲ್ಲೆ

ಯೋಧನಿಂದ ಸಹೋದರಗೆ ಇರಿತ : ತಡೆಯಲು ಬಂದ ತಂದೆಗೂ ಗಾಯ

ಸೌಮ್ಯ ಆರ್

ಕಾಸರಗೋಡು: ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯೋಧನೊಬ್ಬ ತನ್ನ ಸಹೋದರನನ್ನು ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ಚೀಮೇನಿ ತಿಮಿರಿ ತಾಯೆಚೆಂಬ್ರಕಾನ ನಿವಾಸಿ ವರುಣ್‌ದಾಸ್ ಗಾಯಾಳು. ಬುಧವಾರ ರಾತ್ರಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ವರುಣ್‌ದಾಸ್‌ನ ಸಹೋದರ, ಕೋಯಿಕ್ಕೋಡ್ ಟೆರಿಟೋರಿಯಲ್ ಆರ್ಮಿ ಯೋಧ ವಿಪಿನ್‌ದಾಸ್ ಎಂಬುವರನ್ನು ಚೀಮೇನಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ತಡೆಯಲೆತ್ನಿಸಿದ ತಂದೆ ವಿಪ್ರದಾಸ್ ಅವರಿಗೂ ಗಾಯಗಳುಂಟಾಗಿದೆ. ವರುಣ್‌ದಾಸ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.