ಜಿಲ್ಲೆ

ಕ್ರಿಕೆಟ್ ಆಯ್ಕೆ ಟ್ರಯಲ್ಸ್ 16ರಂದು

Dharwada - Santosh Vaidya

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ)ಯ ಧಾರವಾಡ ವಲಯ 16 ವಯೋಮಿತಿಯ ತಂಡ ರಚನೆಗೆ ರಾಜನಗರ ಕ್ರಿಕೆಟ್ ಮೈದಾನದಲ್ಲಿ ಆ. 16ರಂದು ಆಯ್ಕೆ ಟ್ರಯಲ್ಸ್ ನಡೆಯಲಿದೆ.

2007ರ ಸೆಪ್ಟೆಂಬರ್ 1ರಿಂದ 2009ರ ಆಗಸ್ಟ್ 31ರ ನಡುವೆ ಜನಿಸಿದವರು ಟ್ರಯಲ್ಸ್​ನಲ್ಲಿ ಪಾಲ್ಗೊಳ್ಳಬಹುದು. ಬೆಳಗ್ಗೆ 8 ಗಂಟೆಯೊಳಗೆ ಮೈದಾನದಲ್ಲಿ ಕ್ರಿಕೆಟ್ ಸಮವಸ್ತ್ರದಲ್ಲಿ ಹಾಜರಿರಬೇಕು. 14 ವಯೋಮಿತಿಯ ಆಟಗಾರರು ಭಾಗವಹಿಸಲು ಅವಕಾಶ ಇರುವುದಿಲ್ಲ. ವಯಸ್ಸು ಮತ್ತು ವಿಳಾಸವನ್ನು ದೃಢೀಕರಿಸುವ ಜನನ ಪ್ರಮಾಣಪತ್ರ, ಪಾಸ್​ಪೋರ್ಟ್ ಅಥವಾ ಆಧಾರ್ ಕಾರ್ಡ್​ನ್ನು ಹಾಜರುಪಡಿಸಬೇಕು ಝೆರಾಕ್ಸ್ ಪ್ರತಿಯನ್ನು ಪರಿಗಣಿಸುವುದಿಲ್ಲ ಎಂದು ಧಾರವಾಡ ವಲಯ ಸಂಚಾಲಕ ನಿಖಿಲ ಭೂಸದ ತಿಳಿಸಿದ್ದಾರೆ.