ಮೈಸೂರು: ಕಲ್ಪವೃಕ್ಷ ಸಾಂಸ್ಕೃತಿಕ ಪರಿಷತ್ ವತಿಯಿಂದ ಕರ್ನಾಟಕ ರಾಜ್ಯ ಅರ್ಚಕರು, ಆಗಮಿಕರು ಹಾಗೂ ಜ್ಯೋತಿಷಿಗಳನ್ನು ಒಳಗೊಂಡ ‘ಕ್ರಿಕೆಟ್ ಪಂದ್ಯಾವಳಿ’ಯನ್ನು ಜ.7 ಮತ್ತು 8 ರಂದು ಜೆ.ಪಿ.ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
7 ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಇಳೈ ಆಳ್ವಾರ್ ಸ್ವಾಮಿ ಸಾನಿಧ್ಯದಲ್ಲಿ ಮೈಲಾಕ್ ಅಧ್ಯಕ್ಷ ಆರ್.ರಘು ಉದ್ಘಾಟಿಸಲಿದ್ದಾರೆ. ಸೆಸ್ಕ್ ಸಹಾಯಕ ಅಭಿಯಂತರ ಸಿ.ಎಸ್.ಪ್ರವೀಣ್ ಟ್ರೋಫಿ ಅನಾವರಣ ಮಾಡಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ.ಆರ್.ಅರಸ್, ರಾಜ್ಯ ಶಿವಾರ್ಚಕ ಸಂಘದ ಅಧ್ಯಕ್ಷ ಕೆ.ಎಂ.ನಂಜುಂಡಪ್ಪ, ಸಮಾಜ ಸೇವಕ ರಘುರಾಮ್ ವಾಜಪೇಯಿ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಎಚ್.ಎಂ.ಟಿ.ಲಿಂಗರಾಜೇ ಅರಸ್, ಓಂ ಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.