ಜಿಲ್ಲೆ

*ಯುನೈಟೆಡ್ ಕ್ರಿಕೆಟ್ ಲೀಗ್ : ಕ್ಲಾಸಿಕ್ ಸಲ್ಮಾರ್ ಕಾರ್ಕಳ ತಂಡಕ್ಕೆ ಪ್ರಶಸ್ತಿ

Mangaluru - Hariprasad Rai



ಮಂಗಳೂರು : ಐಡಿಯಲ್ ಐಸ್‌ಕ್ರೀಮ್ ಪ್ರಾಯೋಜಕತ್ವ ಹಾಗೂ ಪ್ರೊಫೆಶನಲ್ ಕೊರಿಯರ್, ಹೋಮ್ ಲ್ಯಾಂಡ್ ಹಾಲಿಡೇಸ್, ಬಂಡೀಪುರ ಹೆರಿಟೇಜ್ ವಿಲೇಜ್ ರೆಸಾರ್ಟ್, ದಮ್‌ದಾರ್ ಬಿರಿಯಾನಿ ಹೌಸ್‌ನ ಸಹ ಪ್ರಾಯೋಜಕತ್ವದಲ್ಲಿ ಯುನೈಟೆಡ್ ಕ್ರಿಕೆಟ್
ಲೀಗ್ ಅಂಡರ್ ಆರ್ಮ್ ಸೀಸನ್-5 ನಗರದ ಉರ್ವ ಮೈದಾನ ಮತ್ತು ಬಂಟ್ವಾಳದ ಎಸ್‌ವಿಎಸ್ ಮೈದಾನದಲ್ಲಿ ನಡೆಯಿತು.
ಒಟ್ಟು 10 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ಕ್ಲಾಸಿಕ್ ಸಲ್ಮಾರ್ ಕಾರ್ಕಳ ತಂಡ ಅಗ್ರ ಪ್ರಶಸ್ತಿ ಪಡೆಯಿತು.
ರನ್ನರ್ಸ್‌ ಆಗಿ ಜೈಕಾರ್ ಸ್ಟ್ರೈಕರ್ಸ್ ಮೂಡುಬಿದಿರೆ ತಂಡ ರನ್ನರ್ ಅಪ್ ಹಾಗೂ ಕಾರ್‌ಸ್ಟ್ರೀಟ್ ಫ್ರೆಂಡ್ಸ್ ಮಂಜೇಶ್ವರ ತಂಡ ದ್ವಿತೀಯ ರನ್ನರ್ ಅಪ್ ಬಹುಮಾನ ಪಡೆಯಿತು.
ಬೆಸ್ಟ್ ಬೌಲರ್ ಆಗಿ ಕ್ಲಾಸಿಕ್ ಸಾಲ್ಮರ ಕಾರ್ಕಳದ ಪ್ರತೀಕ್ ಪ್ರಭು, ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ಕಾರ್‌ಸ್ಟ್ರೀಟ್ ಫ್ರೆಂಡ್ಸ್ ಮಂಜೇಶ್ವರದ ರಜತ್ ಶೆಣೈ, ಸರಣಿ ಶ್ರೇಷ್ಠ ಆಗಿ ಕ್ಲಾಸಿಕ್ ಸಾಲ್ಮರ ಕಾರ್ಕಳದ ಮಹೇಶ್ ಶೆಣೈ, ಉದಯೋನ್ಮುಖ ಆಟಗಾರನಾಗಿ ಕಾರ್‌ಸ್ಟ್ರೀಟ್ ಫ್ರೆಂಡ್ಸ್ ಮಂಜೇಶ್ವರ ಪವನ್
ಭಗತ್ ಹಾಗೂ ಬೆಸ್ಟ್ ಫೀಲ್ಡರ್ ಆಗಿ ಕ್ಲಾಸಿಕ್ ಸಾಲ್ಮರ ಕಾರ್ಕಳದ ಸುನಿಲ್ ಕಾಮತ್ ವೈಯಕ್ತಿಕ ಪ್ರಶಸ್ತಿ ಪಡೆದರು.
ಮುಖ್ಯ ಅತಿಥಿಗಳಾಗಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅರ್ಜುನ್ ಭಂಡಾರ್‌ಕಾರ್, ಬಂಟ್ವಾಳದ ಎಸ್‌ವಿಎಸ್ ದೇವಳ ಶಿಕ್ಷಣ
ಸಂಸ್ಥೆಗಳ ಸಂಚಾಲಕ ಬಾಮಿ ನಾಗೇಂದ್ರನಾಥ ಶೆಣೈ, ಜೈಹಿಂದ್ ಕ್ರಿಕೆಟರ್ಸ್‌ ಬಂಟ್ವಾಳದ ಮಾಜಿ ಆಟಗಾರ ಪ್ರಶಾಂತ್ ಭಂಡಾರ್‌ಕಾರ್ ,
ಬಿ.ಎಚ್. ಗಿರೀಶ್ ಪೈ ಬಹುಮಾನಗಳನ್ನು ವಿತರಿಸಿದರು. ಯುನೈಟೆಡ್ ಕ್ರಿಕೆಟ್ ಲೀಗ್‌ನ ಸಂಘಟಕರಾದ ವಿವೇಕ್ ಹೆಗ್ಡೆ, ಕೊಂಚಾಡಿ ನರಸಿಂಹ ಶೆಣೈ, ಕಾರ್ತಿಕ್ ಪ್ರಭು, ನಾಗೇಶ್ ಶಶಾಂಕ್, ಅಜಿತ್ ಭಟ್, ಪವನ್ ಭಕ್ತ ಉಪಸ್ಥಿತರಿದ್ದರು.