ಜಿಲ್ಲೆ

ಕ್ರಿಕೆಟ್​ ಬೆಟ್ಟಿಂಗ್​ ಆಡುತ್ತಿದ್ದವನ ಬಂಧನ

Haveri - Kariyappa Aralikatti

ಹಾನಗಲ್ಲ: ಐಪಿಎಲ್​ ಕ್ರಿಕೆಟ್​ ಬೆಟ್ಟಿಂಗ್​ ಆಡುತ್ತಿದ್ದ ಯುವಕನೊಬ್ಬನ ವಿರುದ್ಧ ಇಲ್ಲಿಯ ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿಯ ಕಮಾಟಗೇರಿ ಓಣಿಯ ಅನಿಲಕುಮಾರ ಎ.ಎಚ್​. ಎಂಬುವನ ವಿರುದ್ಧ ಪ್ರಕರಣ ದಾಖಲಾಗಿರುವುದು.

ಈತ ಪಟ್ಟಣದ ಜನತಾ ಹೈಸ್ಕೂಲ್​ ಬಳಿ ಸಾರ್ವಜನಿಕರ ರಸ್ತೆ ಬದಿ ನಿಂತು ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ನಡೆಯುತ್ತಿದ್ದ ಐಪಿಎಲ್​ ಕ್ರಿಕೆಟ್​ಗೆ ಬೆಟ್ಟಿಂಗ್​ ಆಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.