ಜಿಲ್ಲೆ

ಸಾರ್ವನಿಕರ ಬಳಕೆಗೆ ಚಿತಾಗಾರ ಸಿದ್ಧ !

ರೇಷ್ಮೆ ನಗರ ಡೆಸ್ಕ್

 ಅಗತ್ಯ ಸೌಕರ್ಯ ಕಲ್ಪಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ

ಚನ್ನಪಟ್ಟಣ: ನಗರದ ತಿಟ್ಟಮಾರನಹಳ್ಳಿ ರಸ್ತೆಯಲ್ಲಿ ನಿರ್ಮಿಸಿರುವ ವಿದ್ಯುತ್​ ಚಿತಾಗಾರವನ್ನು ಗುರುವಾರ ಶಾಸಕ ಸಿ.ಪಿ.ಯೋಗೇಶ್ವರ್​, ನಗರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆಗೂಡಿ ಪರಿಶೀಲನೆ ನಡೆಸಿದರು.

ಇಲ್ಲಿನ ಹಿಂದು ರುದ್ರಭೂಮಿಯಲ್ಲಿ ಕೆಲವರ್ಷದ ಹಿಂದೆ ಮಾಜಿ ಸಂಸದ ಡಿ.ಕೆ.ಸುರೇಶ್​ ಅನುದಾನದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್​ ಚಿತಾಗಾರ ನಿರ್ಮಾಣ ಮಾಡಲಾಗಿತ್ತು. ಚಿತಾಗಾರ ಉದ್ಘಾಟನೆಗೊಂಡರೂ ಸಾರ್ವಜನಿಕ ಸೇವೆಗೆ ಲಭ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕರು ಚಿತಾಗಾರಕ್ಕೆ ಭೇಟಿ ನೀಡಿ ಚಿತಾಗಾರದ ಕಾಮಗಾರಿ ಹಾಗೂ ಯಂತ್ರದ ನಿರ್ವಹಣೆಯ ಬಗ್ಗೆ ಪರಿಶೀಲನೆ ನಡೆಸಿ, ಶ್ರೀದಲ್ಲೇ ಚಿತಾಗಾರಕ್ಕೆ ಅಗತ್ಯ ಸೌಕರ್ಯ ಕಲ್ಪಿಸಿಕೊಡುವಂತೆ ನಗರಸಭೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಸದ್ಬಳಕೆಗೆ ಸೂಚನೆ!: ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಪಿ.ಯೋಗೇಶ್ವರ್​, ನಗರದಲ್ಲಿ ನಿರ್ಮಾಣವಾಗಿ ಉದ್ಘಾಟನೆಯಾಗಿದ್ದ ವಿದ್ಯುತ್​ ಚಿತಾಗಾರ ಹಲವು ಕಾರಣಗಳಿಂದ ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಿರಲಿಲ್ಲ. ಇದೀಗ, ನಗರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುತುವರ್ಜಿಯಿಂದ ಬಳಕೆಗೆ ಸಿದ್ಧವಾಗಿದ್ದು, ಶೌಚಗೃಹ ಸೇರಿ ಹಲವು ಕಾಮಗಾರಿಗಳು ನಡೆದಿವೆ. ಇಂದಿನಿಂದ ಚಿತಾಗಾರ ಸಾರ್ವಜನಿಕರ ಬಳಕೆಗೆ ಲಭ್ಯವಿದ್ದು, ನಗರವಾಸಿಗಳು ಚಿತಾಗಾರವನ್ನು ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಅನುದಾನಕ್ಕೆ ಕೊರತೆ ಇಲ್ಲ: ಕಾಂಗ್ರೇಸ್​ ಶಾಸಕರಿಂದಲೇ ಸರ್ಕಾರದಲ್ಲಿ ಅನುದಾನದ ಕೊರತೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್​, ಸರ್ಕಾರ ಅಂದಮೇಲೆ ಕೆಲ ವ್ಯತ್ಯಾಸ ಇರಲಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಗ್ಯಾರಂಟಿ ಯೋಜನೆ ಕೊಡಲಾಗುತ್ತಿರುವುದರಿಂದ ಕೆಲ ಸಮಸ್ಯೆ ಇರಬಹುದು. ಆದರೆ, ನಮ್ಮಕ್ಷೇತ್ರಕ್ಕೆಯಾವುದೇ ಸಮಸ್ಯೆ ಆಗಿಲ್ಲ. ಉಪಚುನಾವಣೆ ಹಿಂದೆ ಕ್ಷೇತ್ರಕ್ಕೆ ಸರ್ಕಾರ ಘೋಷಿಸಿದ ಅನುದಾನಗಳು ಸಿಗಲಿವೆ. ಈಗಾಗಲೇ ಹಲವಾರು ಕಾಮಗಾರಿಗಳಿಗೆ ಹಣಕಾಸು ಇಲಾಖೆಯ ಅನುಮೋದನೆ ಸಿಕ್ಕಿದೆ. ಇನ್ನೂ

ಕಾಲಾವಕಾಶ ಇದೆ.ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದರು.

ಸದಸ್ಯರಾದ ಜಯಮಾಲಾ, ಸತೀಶ್​ ಬಾಬು, ಮತೀನ್​, ಶಬೀರ್​, ನಾಗೇಶ್​, ಎಂ.ಜೆ. ರೇವಣ್ಣ, ನಗರ ಕಾಂಗ್ರೆಸ್​ ಟಕದ ಅಧ್ಯ ಸುನೀಲ್​, ಮುಖಂಡರಾದ ರಾಂಪುರ ಮಲವೆಗೌಡ, ಚಂದ್ರಸಾಗರ್​, ಪಿ.ಡಿ.ರಾಜು, ಸತೀಶ್​ ಬಾಬು, ರಾಂಪುರ ಲೋಕೇಶ್​ ಇತರರು ಇದ್ದರು.

ನೀರಾ ಉದ್ಯಮವಾಗಲಿದೆ!: ತೆಂಗು ಬೆಳೆಗಾರರ ಹಿತ ದೃಷ್ಟಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ತೆಂಗಿಗೆ ವೈಾನಿಕ ದರ ಸಿಗದ ಹಿನ್ನೆಲೆಯಲ್ಲಿ ತೆಂಗಿನ ಬಗ್ಗೆ ತಾತ್ಸಾರ ಬೆಳೆಸಿಕೊಂಡಿದ್ದ ರೈತರು ತೆಂಗುಬೆಳೆಯನ್ನು ಸಂಪೂರ್ಣ ರ್ನಿಲಸಿದ್ದರು. ಇದರ ಪರಿಣಾಮ ತೆಂಗಿಗೆ ನುಸಿಪೀಡೆ, ಬಿಳಿನೋಣ ಹಾವಳಿ ಹೆಚ್ಚಾಗಿ ಇಳುವರಿ ಸಂಪೂರ್ಣ ಕುಸಿತಗೊಂಡಿದೆ. ಸದ್ಯ ತೆಂಗಿಗೆ ಬಂಪರ್​ ಬೆಲೆ ಇದೆ. ಆದರೆ, ಇಳುವರಿ ಸಿಗುತ್ತಿಲ್ಲ. ಹಲವು ಸಮಸ್ಯೆಗಳಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಪಾನೀಯವಾದ ನೀರಾವನ್ನು ಉದ್ಯಮವಾಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ತೆಂಗು ಬೆಳೆಗಾರರ ಹಿತ ಕಾಯುವ ಕೆಲಸ ಮಾಡುತ್ತೇವೆ ಎಂದು ಶಾಸಕರು ಹೇಳಿದರು.

ಹೊರಗಿನ ತಂಪು ಪಾನೀಯಗಳನ್ನು ಸೇವಿಸಿ ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇವುಗಳಿಗೆ ಹೋಲಿಸಿದರೆ ನೈಸರ್ಗಿಕ ಪಾನೀಯವಾದ ನೀರಾ ಬಹಳ ಶ್ರೇಷ್ಠ. ಈ ಹಿನ್ನೆಲೆಯಲ್ಲಿ ನೀರಾ ಇಳಿಸಲು ಅಗತ್ಯವಾದ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಾ ಉದ್ಯಮವಾಗಿ ಬೆಳೆಸಲಾಗುವುದು. ಈ ಮೂಲಕ ತೆಂಗು ಬೆಳೆಗಾರರ ಹಿತ ಕಾಪಾಡಲಾಗುವುದು. > ಸಿ.ಪಿ.ಯೋಗೇಶ್ವರ್​, ಶಾಸಕರು.