ಜಿಲ್ಲೆ

Video | ಪೊಲೀಸ್​ ರ‍್ಯಾಂಬೋಗೆ ಹೃದಯಾಘಾತ; ಭಾವಪೂರ್ಣ ಅಂತಿಮಗೌರವ

ಕೊಡಗು: ನಿಯತ್ತು ಹಾಗೂ ಸಾಹಸಕ್ಕೆ ಹೆಸರಾಗಿದ್ದ 'ಪೊಲೀಸ್​ ರ‍್ಯಾಂಬೋ'ಗೆ ಹೃದಯಾಘಾತವಾಗಿದ್ದು, ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಭಾವಪೂರ್ಣವಾಗಿ ಅಂತಿಮ ಸಂಸ್ಕಾರ ನಡೆಸಲಾಯಿತು.

ಶುನಕ ರ‍್ಯಾಂಬೋ ಕೊಡಗು ಪೊಲೀಸ್​ ಶ್ವಾನದಳದಲ್ಲಿ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸಿತ್ತು. ಬುಧವಾರ ಮಂಗಳೂರಿಗೆ ಕರ್ತವ್ಯಕ್ಕೆ ಕರೆದೊಯ್ಯಲಾಗಿದ್ದ ರ‍್ಯಾಂಬೋಗೆ ಅಲ್ಲಿನ ಬಿಸಿಲ ತಾಪ ತಡೆಯಲಾಗದೆ ಹೃದಯಾಘಾತವಾಗಿದೆ.

ರ‍್ಯಾಂಬೋ ಏಳು ವರ್ಷಗಳಿಂದ ಬಾಂಬ್​ ಪತ್ತೆ ದಳದಲ್ಲಿದ್ದು ಸಾಹಸ ಮೆರೆದಿತ್ತು. ಮಾತ್ರವಲ್ಲ ರಾಜ್ಯದಲ್ಲಿ ಗಣ್ಯಾತಿಗಣ್ಯರ ಭದ್ರತೆಯಲ್ಲೂ ಕರಾರುವಾಕ್ಕಾಗಿ ಕಾರ್ಯನಿರ್ವಹಿಸಿತ್ತು. ಗುರುವಾರ ಕೊಡಗಿನ ಪೊಲೀಸ್​ ಕವಾಯತು ಮೈದಾನದಲ್ಲಿ ರ‍್ಯಾಂಬೋಗೆ ಕೊಡಗು ಪೊಲೀಸ್​ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು. ಬಳಿಕ ಇಲಾಖೆ ವತಿಯಿಂದಲೇ ಅಂತಿಮಸಂಸ್ಕಾರ ನಡೆಸಲಾಯಿತು.