ದೆಹಲಿ ರೈತ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ವೀರಮರಣ ಹೊಂದಿದ ಯುವ ರೈತ ಶುಭಕರನ್ ಸಿಂಗ್ ಅವರ ಅಸ್ಥಿಯನ್ನು ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಕಬ್ಬು ಬೆಳಗಾರರ ಸಂಘದ ವತಿಯಿಂದ ವಿಸರ್ಜಿಸಲಾಯಿತು.  
ಜಿಲ್ಲೆ

ಹುತಾತ್ಮ ರೈತ ಶುಭಕರನ್ ಸಿಂಗ್ ಅಸ್ಥಿ ವಿಸರ್ಜನೆ

ತಿ.ನರಸೀಪುರ: ದೆಹಲಿ ರೈತ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ವೀರಮರಣ ಹೊಂದಿದ ಯುವ ರೈತ ಶುಭಕರನ್ ಸಿಂಗ್ ಅವರ ಅಸ್ಥಿಯನ್ನು ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಕಬ್ಬು ಬೆಳಗಾರರ ಸಂಘದ ವತಿಯಿಂದ ವಿಸರ್ಜಿಸಲಾಯಿತು.


ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ ಮಾತನಾಡಿ, ದೇಶದ ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಬೆಳೆಗಳಿಗೆ ಎಂಎಸ್‌ಪಿ ನಿಗದಿಗೆ ಒತ್ತಾಯಿಸಿ ದೆಹಲಿಯಲ್ಲಿ ಪಂಜಾಬ್, ಹರಿಯಾಣ ರೈತರು ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟದ ಸಂದರ್ಭ ನಡೆದ ಗೋಲಿಬಾರ್‌ನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾಗಿ ಪಂಜಾಬಿನ ಯುವ ರೈತ ಶುಭಕರನ್ ಸಿಂಗ್ ವೀರ ಮರಣ ಹೊಂದಿದ್ದಾರೆ. ಈ ಯುವ ರೈತನ ಚಿತಾಭಸ್ಮವು ನಮ್ಮ ರಾಜ್ಯಕ್ಕೂ ಬಂದಿದ್ದು, ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕೇರಳದಿಂದ ಪಟ್ಟಣಕ್ಕೆ ತಂದು ವಿಸರ್ಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ, ಮುಖಂಡರಾದ ಕಿರಗಸೂರು ಪ್ರಸಾದ್ ನಾಯಕ್, ಅಪ್ಪಣ್ಣ, ಕುರುಬೂರು ಗೌರಿಶಂಕರ್, ಬಿ.ಪಿ.ಪರಶಿವಮೂರ್ತಿ, ಬನ್ನಳ್ಳಿ ಶಾಂತರಾಜು, ಆದಿಬೆಟ್ಟಳ್ಳಿ ರವಿ, ಕರುವಟ್ಟಿ ನಾಗರಾಜ್, ಕುರುಬೂರು ಲೋಕೇಶ್ , ಮಲ್ಲೇಶ್ ಇದ್ದರು.