ಮೈಸೂರು: ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ ಯಾರೂ ಅಧಿಕಾರದಲ್ಲಿರುತ್ತಾರೋ ಅವರಿಗೆ ಕ್ರೆಡಿಟ್ ಸಲ್ಲುತ್ತದೆ. ಇದಕ್ಕಾಗಿ ಪೈಪೋಟಿ ಸರಿಯಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಭಿಪ್ರಾಯಪಟ್ಟರು.
ಅಮೆರಿಕ ನಮ್ಮ ಆಂತರಿಕ ವಿಚಾರದಲ್ಲಿ ಪ್ರವೇಶ ಮಾಡುವುದು ಭದ್ರತಾ ದೃಷ್ಟಿಯಿಂದ ಒಳ್ಳೆಯದಲ್ಲ. ಯುದ್ಧ ವಿರಾಮ ವಿಚಾರ ಘೋಷಣೆಯಾದ ಮೇಲೂ ಫೈರಿಂಗ್ ಆಗಿದೆ. ಯುದ್ಧ ವಿರಾಮದ ಚರ್ಚೆ ಎಲ್ಲಿ ಆಯ್ತು ಅನ್ನೋ ಬಗ್ಗೆ ಮಾಹಿತಿ ಇಲ್ಲ. ಈಗೀಗ ಒಂದೊಂದೆ ಮಾಹಿತಿ ಹೊರ ಬರುತ್ತಿದೆ ಎಂದು ಪ್ರತಿಕ್ರಿಯಿಸಿದರು.
ದೇಶದ ವಿಷಯದಲ್ಲಿ ನಮ್ಮ ಹೇಳಿಕೆಗೆ ಕಡಿವಾಣ ಹಾಕಿಕೊಳ್ಳಬೇಕು. ಕೇಂದ್ರ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡಿದ್ದೇವೆ. ಬೇಷರತ್ ಬೆಂಬಲ ಕೊಟ್ಟಿದ್ದೇವೆ. ಹೀಗಾಗಿ ಅವರು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ನಮಗೆ ತಿಳಿಸಿದರೆ ಒಳ್ಳೆಯದು. ಭದ್ರತೆ ದೃಷ್ಟಿಯಿಂದ ಕೇಂದ್ರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಒಳ್ಳೆಯದು ಎಂದರು.