ಕಾರ್ಕಳ: ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು ವಾಣಿಜ್ಯ ವಿಭಾಗ ಕಾಮರ್ಸ್ ಫೆಸ್ಟ್ ಪ್ರಯುಕ್ತ ನಡೆಸಿದ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಕಾರ್ಕಳ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ವಿದ್ಯಾರ್ಥಿಗಳಾದ ಆದ್ಯಾ ಪಡ್ರೆ, ಚಿರಾಯು, ಸುಜೀತ್, ಶ್ರೇಯಸ್, ಮಂಗಿಲಲ್, ಅನ್ವಿತ್, ಕಿಶನ್, ಚಿನ್ಮಯ್, ಸೃಷ್ಟಿ, ಅರುಷಿ, ಸೋನಿಯಾ, ಸಂಜನಾ, ಪ್ರೇರಣಾ, ಹರ್ಷಿತಾ, ಅನಿಷಾ, ವೃದ್ಧಿ, ದ್ಯುತಿ, ಪೂರ್ವಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ತಂದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಬೋಧಕ ಬೋಧಕೇತರ ವೃಂದ ಶ್ಲಾನೆ ವ್ಯಕ್ತಪಡಿಸಿದೆ.