ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಸೃಷ್ಟಿಗೆ ತಾಯಿ ಲಲಿತಾ ದಾಯಿಪುಲ್ಲೆ ಸಿಹಿ ತಿನ್ನಿಸುತ್ತಿರುವುದು. 
ಜಿಲ್ಲೆ

ವಿಜ್ಞಾನ ವಿಭಾಗದಲ್ಲಿ ಶೇ.95 ಗಳಿಸಿದ ಸೃಷ್ಟಿ

ಗಾಯತ್ರಿ ಮಾಲಿಪಾಟೀಲ್

ಕನಕಗಿರಿ: ಎರಡು ವರ್ಷದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದ ಸೃಷ್ಟಿ ದಾಯಿಪುಲ್ಲೆ ಗಂಗಾವತಿಯ ವಿದ್ಯಾನಿಕೇತನ ಪಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.95 ಅಂಕ ಪಡೆದು ಸಾಧನೆ ಮಾಡಿದ್ದಾಳೆ. 10ನೇ ತರಗತಿಯಲ್ಲಿ ಶೇ.96 ಪಡೆದಿದ್ದಳು. ಇದೀಗ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 571 ಅಂಕಗ ಪಡೆದಿದ್ದಾಳೆ.