ಕೊಳ್ಳೇಗಾಲ ಪಟ್ಟಣದ ಬಸವೇಶ್ವರ ನಗರದ ಸಂಕಷ್ಟರ ಗಣಪತಿ ದೇವಾಲಯ ಪಕ್ಕದ ಖಾಲಿ ನಿವೇಶನದ ಕಸ ಸುರಿಯುತ್ತಿದ್ದ ಸ್ಥಳದಲ್ಲಿ ನಗರಸಭೆ ವತಿಯಿಂದ ರಂಗೋಲಿ ಬಿಡಿಸಿ ಸ್ವಚ್ಛತಾ ಜಾಗೃತಿ ನಡೆಸಲಾಯಿತು.  
ಜಿಲ್ಲೆ

ರಂಗೋಲಿ ಬಿಡಿಸಿ ಸ್ವಚ್ಛತಾ ಜಾಗೃತಿ

ಶಿವಶಂಕರ್ ಎಂ. ಹೆಬ್ಬಳ್ಳ

ಕೊಳ್ಳೇಗಾಲ: ಪಟ್ಟಣದ ಬಸವೇಶ್ವರ ನಗರದಲ್ಲಿ ರಸ್ತೆ ಬದಿಯಲ್ಲಿ ಕಸ ಸುರಿಯದಂತೆ ನಗರಸಭೆ ವತಿಯಿಂದ ರಂಗೋಲಿ ಬಿಡಿಸಿ ಸ್ವಚ್ಛತಾ ಜಾಗೃತಿ ಮೂಡಿಸಲಾಯಿತು.

ಬಸವೇಶ್ವರ ನಗರದ ಸಂಕಷ್ಟರ ಗಣಪತಿ ದೇವಾಲಯ ಪಕ್ಕದ ಖಾಲಿ ನಿವೇಶನ ಹಾಗೂ ನಗರಸಭೆ ಕಚೇರಿ ಸುತ್ತುಗೋಡೆ ಸಮೀಪ ಸಾರ್ವಜನಿಕರು ಕಸ ಸುರಿಯುತ್ತಿದ್ದರು. ಇದರಿಂದ ನೈರ್ಮಲ್ಯ ಹಾಳಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯ ಕಮ್ಯೂನಿಟಿ ಮೊಬೈಲೈಸರ್ ಜ್ಯೋತಿ ನೇತೃತ್ವ ಅಕ್ಕನ ಬಳಗದ ಅಧ್ಯಕ್ಷೆ ಸವಿತಾ ಲೋಕೇಶ್ ಮತ್ತು ಪದಾಧಿಕಾರಿಗಳ ಸಹಯೋಗದಲ್ಲಿ ಕಸ ಸುರಿಯುವ ಜಾಗವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡುವ ಕಾರ್ಯಕ್ರಮ ನಡೆಸಲಾಯಿತು.

ನಗರಸಭೆ ಸದಸ್ಯ ಶಂಕರ್ ನಾರಾಯಣಗುಪ್ತ, ಅಕ್ಕನ ಬಳಗದ ಕಾರ್ಯದರ್ಶಿ ಶ್ವೇತಾ ಸ್ವಾಮಿ, ಖಜಾಂಚಿ ಚಂದನ ಪ್ರಕಾಶ್, ಸದಸ್ಯೆ ಗೀತಾ ಮಂಜುನಾಥ್, ರಾಜೇಶ್ವರಿ, ಜನನಿ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರವೀಣ್ , ಪ್ರಸಾದ್ ಸ್ಕ್ಯಾನಿಂಗ್ ಸೆಂಟರ್‌ನ ಡಾ.ನಾಗ ಪ್ರಸಾದ್ ಮತ್ತಿತರಿದ್ದರು.