ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಸರವಾದಿಗಳು ಎಲ್ಲ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಅಂದಾಗ ಮಾತ್ರ ನಮ್ಮ ಸುತ್ತಲಿನ ಪರಿಸರ ಉಳಿಸಲು ಸಾಧ್ಯ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ವಿಶ್ವ ಪರಿಸರ ದಿನ ನಿಮಿತ್ತ ಇಲ್ಲಿನ ಶ್ರೀಪಾದನಗರ ಉದ್ಯಾನದಲ್ಲಿ ಶ್ರೀಪಾದನಗರ ನಿವಾಸಿಗಳ ಸಂಘ ಹಾಗೂ ಮಹಿಳಾ ಮಂಡಳ ವತಿಯಿಂದ ಶನಿವಾರ ಏರ್ಪಡಿಸಿದ್ದ ವನಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಪಾದನಗರ ನಿವಾಸಿಗಳ ಸಂಘವು ಎಲ್ಲರಿಗೂ ಮಾದರಿಯಾಗುವಂತೆ ಅಭಿವೃದ್ಧಿ ಕಾರ್ಯ ನಡೆಸಿದೆ. ಇದೀಗ ಉದ್ಯಾನಕ್ಕೆ ಸ್ವತಃ ಮಾದರಿ ನಕ್ಷೆ ತಯಾರಿಸಿ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ. ಉದ್ಯಾನದಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಅಳವಡಿಸಲು ಶಾಸಕರ ಅನುದಾನದಿಂದ 5 ಲಕ್ಷ ರೂ. ನೀಡಲಾಗುವುದು ಎಂದರು.
ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ ಮಾತನಾಡಿ, ಶ್ರೀಪಾದನಗರದ ನಿವಾಸಿಗಳು ಸ್ವಂತ ಹಣ ಸಂಗ್ರಹಿಸಿ ಬೆಲೆ ಬಾಳುವ ವಿವಿಧ ತಳಿಯ ಗಿಡಗಳನ್ನು ನೆಟ್ಟಿರುವುದು ಎಲ್ಲರೂ ಮೆಚ್ಚುವಂತಹ ಕಾರ್ಯ. ಉದ್ಯಾನದಲ್ಲಿ ವಾಕಿಂಗ್ ಪಾಥ್ ಅಳವಡಿಸುವ ಕಾರ್ಯವನ್ನು ಶೀಘ್ರದಲ್ಲಿ ರ್ಪೂಣಗೊಳಿಸಲಾಗುವುದು ಎಂದರು.
ಪರಿಸರವಾದಿ ಪಂಡಿತ್ ಮುಂಜಿ, ಡಾ. ಸುಭಾಷ್ ಬಬ್ರುವಾಡ, ಶಾರದಾ ಗೋಪಾಲ, ಜಯಶ್ರೀ ಗೌಳಿ, ಶಿವಶಂಕರ ಐಹೊಳೆ ಮಾತನಾಡಿದರು. ಎಸ್.ಎನ್. ಪುರಾಣಿಕ ಅಧ್ಯಕ್ಷತೆ ವಹಿಸಿದ್ದರು.
ಎಸ್.ಎಸ್. ಜಂಬಗಿ ಸ್ವಾಗತಿಸಿದರು. ಮೃತ್ಯುಂಜಯ ಮಲ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಕೆ. ನದಾ್ ನಿರೂಪಿಸಿದರು. ಜಯಶ್ರೀ ಶಾಂತಿಗಿರಿ ವಂದಿಸಿದರು.