ಉದ್ಯೋಗ ಸೃಷ್ಟಿ ಮಾಡುವಂತೆ ಆಗ್ರಹಿಸಿ ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ ಸಿಪಿಎಂನಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಸಿಪಿಎಂ ತಾಲೂಕು ಕಾರ್ಯದರ್ಶಿ ಕೆ. ಹುಸೇನಪ್ಪ, ಮುಖಂಡರಾದ ಬಸವರಾಜ ಮರಕುಂಬಿ, ಮಲ್ಲಪ್ಪ ಮ್ಯಾಗಡೆ, ಶಿವಕುಮಾರ ಈಚನಾಳ ಇತರರಿದ್ದರು. 
ಜಿಲ್ಲೆ

ಸಾರ್ವಜನಿಕ ರಂಗದಲ್ಲಿ ಉದ್ಯೋಗ ಸೃಷ್ಟಿಸಿ

ಕನಕಗಿರಿ: ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ಈಡೇರಿಸದಿರುವುದರಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸಿಪಿಎಂ ತಾಲೂಕು ಕಾರ್ಯದರ್ಶಿ ಕೆ. ಹುಸೇನಪ್ಪ ಹೇಳಿದರು.


ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸಿಪಿಎಂ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶುಕ್ರವಾರ ಮಾತನಾಡಿದರು. ರೈತರ ಆದಾಯ ದ್ವಿಗುಣಗೊಳಿಸುವುದು, ಪ್ರತಿ ವಷರ್ 2 ಕೋಟಿ ಉದ್ಯೋಗ ಸೃಷ್ಟಿ, ಬೆಲೆ ಏರಿಕೆ ತಡೆಗಟ್ಟುವುದು, ಬಡವರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವ ಭರವಸೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ. ಬದಲಾಗಿ ಕಾರ್ಪೋರೇಟ್ ಸಂಸ್ಥೆಗಳಿಗೆ ನೆರವು ನೀಡಲಾಗಿದೆ ಎಂದು ಆರೋಪಿಸಿದರು.


ನೆಲ, ಜಲ, ಅರಣ್ಯ, ಗಣಿ, ಹಣಕಾಸು, ಬಜೆಟ್ ಹಾಗೂ ಮಾನವ ಸಂಪನ್ಮೂಲಗಳನ್ನು ಖಾಸಗಿ ಕಂಪನಿಗಳಿಗೆ ಒದಗಿಸುವ ಬದಲು ಸಾರ್ವಜನಿಕ ರಂಗದಲ್ಲಿ ಬಂಡವಾಳ ಹೆಚ್ಚಿಸಿ ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿದರು. ಮುಖಂಡರಾದ ಬಸವರಾಜ ಮರಕುಂಬಿ, ಮಲ್ಲಪ್ಪ ಮ್ಯಾಗಡೆ, ಶಿವಕುಮಾರ ಈಚನಾಳ, ಪರಶುರಾಮ, ನಬಿಸಾಬ್, ಅಲ್ಲಾಸಾಬ್ ದುರ್ಗಪ್ಪ, ನಿಂಗಪ್ಪ ಇತರರಿದ್ದರು.