ಇಟ್ಟಂಗಿಹಾಳ ರಸ್ತೆಯಲ್ಲಿರುವ ವೇದ ಅಕಾಡೆಮಿ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲಾ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಸಂಸ್ಥಾಪಕ ಶಿವಾನಂದ ಕೆಲೂರ, ಮಾಜಿ ಪೊಲೀಸ್ ಅಧಿಕಾರಿ ಬಿ.ಆರ್. ಚೌಕಿಮಠ, ಪಾಲಿಕೆ ಸದಸ್ಯ ಶಿವರುದ್ರಪ್ಪ ಬಾಗಲಕೋಟ, ವಿಮಲಾ ರಫೀಕ ಖಾನೆ ಇತರರಿದ್ದರು. 
ಜಿಲ್ಲೆ

ದೇಶ ಭಕ್ತಿಯ ಅರಿವು ಮೂಡಿಸಿ

Vijayapura


ವಿಜಯಪುರ: ಮಕ್ಕಳ ಮುಗ್ಧ ಮನಸ್ಸು ಬಿಳಿ ಹಾಳೆಯಂತೆ. ಅವರಿಗೆ ದೇಶಭಕ್ತಿಯ ಅರಿವು ಮೂಡಿಸಿ ದೇಶಾಭಿಮಾನ ಹೆಚ್ಚಿಸಬೇಕು ಎಂದು ಮಾಜಿ ಪೊಲೀಸ್ ಅಧಿಕಾರಿ ಬಿ.ಆರ್. ಚೌಕಿಮಠ ಹೇಳಿದರು.

ನಗರದ ಇಟ್ಟಂಗಿಹಾಳ ರಸ್ತೆಯಲ್ಲಿರುವ ವೇದ ಅಕಾಡೆಮಿ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಹಾಗೂ ವಿಜಯಪುರ ಮಹಾನಗರ ಪಾಲಿಕೆ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳು ದೇವಲೋಕದ ಪುಷ್ಪಗಳು. ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ. ಭಾರತ ಸ್ವಾಂತಂತ್ರೃ ಹೋರಾಟದಲ್ಲಿ ಅವರ ಪಾತ್ರ ಅಪಾರ ಎಂದರು.

ಪಾಲಿಕೆ ಸದಸ್ಯ ಶಿವರುದ್ರಪ್ಪ ಬಾಗಲಕೋಟ ಮಾತನಾಡಿ, ಮನುಷ್ಯ ಸಮಾಜಮುಖಿಯಾಗಿ ಬದುಕಬೇಕು. ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ವಿಮಲಾ ರಫೀಕ ಖಾನೆ ಮಾತನಾಡಿ, ಸಾಧನೆ ಎಂಬುದು ಸಾಧಕನ ಸೊತ್ತು. ನಿರ್ದಿಷ್ಟ ಗುರಿಯೊಂದಿಗೆ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದರು.

ಶ್ರೀ ವೇದ ಅಕಾಡೆಮಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಶಿವಾನಂದ ಕೆಲೂರ ಮಾತನಾಡಿ, ಅವಮಾನಗಳನ್ನು ಸ್ವೀಕರಿಸುವ ವ್ಯಕ್ತಿಗೆ ಮುಂದೊಂದು ದಿನ ಸನ್ಮಾನ ಸ್ವೀಕರಿಸುವ ದಿನ ಬರುತ್ತದೆ. ಪಂಡಿತ ಜವಾಹರಲಾಲ ನೆಹರು ಅವರ ಆಶಯದಂತೆ ಧೀರ ನಾಗರಿಕರಾಗಿ ಸಾಧಕರಾಗಿ ತಂದೆ-ತಾಯಿ ಮೆಚ್ಚುವಂತಹ ಮಕ್ಕಳಾಗಿ ಬಾಳೋಣ ಎಂದು ಹೇಳಿದರು.

ವೇದ ಅಕಾಡೆಮಿ ಉಪಾಧ್ಯಕ್ಷ ದಯಾನಂದ ಕೆಲೂರ, ಉದ್ಯಮಿ ಬಿ.ಆರ್. ನಂದಯ್ಯಗೋಳ ಮಾತನಾಡಿದರು. ಶಾಲೆ ನಿರ್ದೇಶಕಿ ಜ್ಯೋತಿ ದೇಸಾಯಿ ಸ್ವಾಗತಿಸಿದರು. ಕೋಚಿಂಗ್ ವಿಭಾಗ ಮುಖ್ಯಸ್ಥ ಸುರೇಶ ಜತ್ತಿ ನಿರೂಪಿಸಿದರು.

ಎಕ್ಸಲೆಂಟ್, ವೇದ ಅಕಾಡೆಮಿ ಶಾಲೆ ಆಡಳಿತಾಧಿಕಾರಿ, ಮುಖ್ಯ ಗುರುಗಳಾದ ಅನೀಲಕುಮಾರ ಅಂಕದ, ಮಂಜುನಾಥ ಎಂ.ಎಂ., ಶ್ರೀಶೈಲ ಹೆಗಲಾಡಿ, ಶಿವಾನಂದ ಗೋಕಾವಿ, ರಶ್ಮಿ ಕವಟಗಿಮಠ, ಶಿಕ್ಷಕ, ಶಿಕ್ಷಕಿಯರು, ಮಕ್ಕಳು ಭಾಗವಹಿಸಿದ್ದರು.