ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಅಬಕಾರಿ ನಿರೀಕ್ಷಕ ಎಂ.ಆರ್.ಶೇಖರ್ ಮಾತನಾಡಿದರು. ಪಿ.ಸರಸ್ವತಿ, ಡಿ.ಪಿ.ಶ್ರೀ ಕುಮಾರ್, ಎ.ಜೆ.ಡೇವೀಸ್, ಎಂ.ಪಿ.ಬೀನಾ ಇದ್ದರು. 
ಜಿಲ್ಲೆ

ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ವಿದ್ಯಾರ್ಥಿ ಜೀವನದಿಂದಲೇ ಮಾದಕ ವಸ್ತುಗಳನ್ನು ಬಳಸುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ಅಬಕಾರಿ ನಿರೀಕ್ಷಕ ಎಂ.ಆರ್.ಶೇಖರ್ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಬಕಾರಿ ನಿರೀಕ್ಷಕರ ಕಚೇರಿ ಹಾಗೂ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದು ದೇಹ ಮಾತ್ರವಲ್ಲದೇ ಮಾನಸಿಕ ಸ್ಥಿರತೆಯನ್ನು ಹಾಳು ಮಾಡುತ್ತಿದೆ. ಅದ್ದರಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಉನ್ನತ ವ್ಯಾಸಂಗ ಮಾಡುವ ಕಡೆ ಚಿಂತನೆ ನಡೆಸಬೇಕಿದೆ ಎಂದರು.
ಪ್ರಾಚಾರ್ಯ ಪಿ.ಸರಸ್ವತಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ನೀಡಬೇಕು. ನಿಮ್ಮ ಪಾಲಕರ ಆಸೆಗಳನ್ನು ಈಡೇರಿಸಿ ಅವರಿಗೆ ಮತ್ತು ವಿದ್ಯೆ ಕಲಿತ ಕಾಲೇಜಿಗೆ ಕೀರ್ತಿ ತರುವಂತಾಗಬೇಕು. ದೇಶದ ಉತ್ತಮ ಪ್ರಜೆಯಾಗಬೇಕು ಎಂದರು.
ರಾಜ್ಯಶಾಸ ಉಪನ್ಯಾಸಕ ಡಿ.ಪಿ.ಶ್ರೀಕುಮಾರ್, ಉಪನ್ಯಾಸಕ ಎ.ಜೆ.ಡೇವೀಸ್, ಎಂ.ಪಿ.ಬೀನಾ, ಮೈಲಾರಪ್ಪ, ಮಹಮ್ಮದ್ ಅಸಾವುದ್ದೀನ್ ಖಾನ್,ಎಂ.ವಿ.ಲೋಕೇಶ್,ಡಿ.ಹನುಮಂತಪ್ಪ, ಕಿಜಾರ್‌ಅಹಮ್ಮದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.