ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಜೈ ಭೀಮ್, ಜೈ ಬಾಪು, ಜೈ ಸಂವಿಧಾನ’ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲರನ್ನು ಸನ್ಮಾನಿಸಲಾಯಿತು. ಸುನೀಲಗೌಡ ಪಾಟೀಲ, ಕೀರ್ತಿ ಗಣೇಶ, ಯಲ್ಲಪ್ಪ ಹೆಗಡೆ ಮತ್ತಿತರರಿದ್ದಾರೆ.  
ಜಿಲ್ಲೆ

ಸಂವಿಧಾನ ಕುರಿತು ಜಾಗೃತಿ ಮೂಡಿಸಿ; ಬಸನಗೌಡ ಪಾಟೀಲ

Vijyapura - Parsuram Bhasagi

ವಿಜಯಪುರ: ವಿದ್ಯಾರ್ಥಿಗಳಿಗೆ ಸಂವಿಧಾನ ಕುರಿತು ಜಾಗೃತಿ ಮೂಡಿಸಬೇಕೆಂದು ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದಿಂದ ‘ಗಾಂಧಿ ಭಾರತ’ ಅಭಿಯಾನದಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಜೈ ಭೀಮ್, ಜೈ ಬಾಪು, ಜೈ ಸಂವಿಧಾನ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನದಿಂದ ಮಾತ್ರ ದೇಶದ ಉಳಿವು ಸಾಧ್ಯ. ಸಂವಿಧಾನ ಈ ದೇಶದ ಜನತೆಗೆ ಘನತೆಯಿಂದ ಬದುಕುವ ಹಕ್ಕು ನೀಡಿದೆ. ಸಮಾನತ, ಭ್ರಾತೃತ್ವದ ಸಂದೇಶ ಸಾರಿದೆ. ಇಂಥ ಸಂವಿಧಾನದ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.

ವಿಪ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಎನ್‌ಎಸ್‌ಯುಐ ಸಂಘಟನೆಯ ಮಹತ್ವ ತಿಳಿಸಿದರು.

ಎನ್‌ಎಸ್‌ಯುಐ ರಾಜ್ಯ ಅಧ್ಯಕ್ಷ ಕೀರ್ತಿ ಗಣೇಶ ಮಾತನಾಡಿದರು. ಯಲ್ಲಪ್ಪ ಹೆಗಡೆ ಉಪನ್ಯಾಸ ನೀಡಿದರು. ಅಕ್ಕ ಮಹಾದೇವಿ ವಿವಿಯ ಕುಲಪತಿ ಶಾಂತದೇವಿ ಟಿ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಮಂತ, ಕಾರ್ಯದರ್ಶಿ ಮಂಜುನಾಥ ಶಾಸ್ತ್ರೀ, ಸದ್ದಾಂ ಕುಂಟೋಜಿ, ಪ್ರದೀಪ್ ರಾಜಣ್ಣ, ಅಮಿತ್ ಚವಾಣ್ ಮತ್ತಿತರರಿದ್ದರು.