ಸರಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರವಿಕುಮಾರ್, ರಾಧಿಕಾ, ಉಮಾ, ಪಾರ್ಥಸಾರಥಿ, ಭಾಗ್ಯಲಕ್ಷ್ಮೀ ಇದ್ದರು. 
ಜಿಲ್ಲೆ

ತಂಬಾಕು ಉತ್ಪನ್ನರಹಿತ ಪರಿಸರ ನಿರ್ಮಿಸಿ

ಲೋಕೇಶ್ ಮನು. ಡಿ

ಸರಗೂರು: ಮನೆ, ಶಾಲೆ, ಕಚೇರಿ ಸೇರಿದಂತೆ ನಮ್ಮ ಪರಿಸರವನ್ನು ತಂಬಾಕು ಉತ್ಪನ್ನಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳುವುದು ಎಲ್ಲದ ಕರ್ತವ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ನಾವು ಸರಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕು ಮಟ್ಟದ ವಿಶ್ವ ತಂಬಾಕು ರಹಿತ ದಿನ ಆಚರಿಸುತ್ತಿದ್ದೇವೆ ‘ಆಕರ್ಷಕ ಉತ್ಪನ್ನಗಳು ಕರಾಳ ಉದ್ದೇಶಗಳು (ತಂಬಾಕು ಮತ್ತು ನೀಕೋಟಿನ್ ಉದ್ಯಮಗಳ ಮುಖವಾಡವನ್ನು ಬಿಚ್ಚಿಡುವುದು) ಈ ಬಾರಿಯ ಧ್ಯೇಯವಾಖ್ಯೆವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿದರು.

ಪಪಂ ಉಪಾಧ್ಯಕ್ಷ ವೀರೇಶ್, ಮಾಜಿ ಸ್ಥಾಯಿ ಸಮಿತಿ ಸದಸ್ಯ ಉಮಾ ರಾಮಚಂದ್ರ, ವೈದ್ಯಾಧಿಕಾರಿ ಡಾ. ಪಾರ್ಥಿ ಸಾರಥಿ, ಪ್ರಸೂತಿ ಮತ್ತು ಸ್ತ್ರೀರೋಗ ರೋಗ ತಜ್ಞೆ ಡಾ.ಭಾಗ್ಯಲಕ್ಷ್ಮೀ, ವೈದ್ಯಾಧಿಕಾರಿಗಳಾದ ಡಾ. ಸುಜಾತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರ, ಇಲಾಖೆಯ ಸಿಬ್ಬಂದಿ ನಾಗೇಂದ್ರ, ರವಿರಾಜ್, ಜಗದೀಶ್, ಪುಷ್ಪಾ, ಶಾಂತಿ, ವಿಜಯ ರಾಘವ, ಹರೀಶ್ ಬಿಡಗಲು, ಹರೀಶ್, ಮಹೇಶ್ ಮಹದೇವಸ್ವಾಮಿ, ಮಹಾದೇವ, ಚಂದ್ರು, ಮಾನಸ, ಶ್ವೇತಾ, ಮಂಜುಳಾ, ಸಹನಾ, ಸೇಂಟ್ ಮೇರಿಸ್ ಆಸ್ಪತ್ರೆಯ ಅಸಿಸ್ಟೆಂಟ್ ಪ್ರೊ. ಸ್ಮಿತಾ ಡಿಸೋಜ ಶರ್ಮಿಳಾ, ಸೇಂಟ್ ಮೇರಿ ಕಾಲೇಜಿನ ವಿದ್ಯಾರ್ಥಿನಿಯರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.