ಜಿಲ್ಲೆ

ಶ್ರೀದೇವಿ ಮಾತೆಯರ ತೊಟ್ಟಿಲೋತ್ಸವ

ಹುಬ್ಬಳ್ಳಿ : ಶ್ರೀ ದುರ್ಗಾಷ್ಟಮಿ ನಿಮಿತ್ತ ಇಲ್ಲಿನ ದಾಜಿಬಾನಪೇಟನ ಶ್ರೀ ದುರ್ಗಾದೇವಿ ದೇವಸ್ಥಾನ ಎಸ್​ಎಸ್​ಕೆ ಪಂಚ ಟ್ರಸ್ಟ್ ವತಿಯಿಂದ ಮಂಗಳವಾರದಂದು ಶ್ರೀ ದುರ್ಗಾದೇವಿ ಮಾತೆ ಹಾಗೂ ಶ್ರೀ ದ್ಯಾಮವ್ವ ದೇವಿ ಮಾತೆಯರಿಗೆ ತೊಟ್ಟಿಲೋತ್ಸವ ಪೂಜೆ ನೆರವೇರಿತು.

ಶ್ರೀದೇವಿಯರಿಗೆ ವಿಶೇಷ ಅಲಂಕಾರ ಮಾಡಿ, ಸಿಹಿ ತಿಂಡಿ ನೈವೇದ್ಯ ಅರ್ಪಿಸಿ, ಪೂಜೆ ಸಲ್ಲಿಸಲಾಯಿತು. ಟ್ರಸ್ಟ್​ನ ಮುಖ್ಯ ಧರ್ಮದರ್ಶಿ ತಾರಾಸಾ ದೊಂಗಡಿ, ನೀಲಕಂಠಸಾ ಜಡಿ, ಭಾಸ್ಕರ ಜಿತೂರಿ, ಅಶೋಕ ಕಲಬುರ್ಗಿ, ಎ.ಪಿ. ಪವಾರ, ಎನ್.ಆರ್. ಹಬೀಬ, ವಿಷ್ಣುಸಾ ಪೂಜಾರಿ, ಆರ್.ಡಿ. ರತನ, ಎನ್.ಐ. ಕಲಬುರ್ಗಿ, ಶೋಭಾ ಇರಕಲ್, ಪ್ರಭಾ ಕಲಬುರ್ಗಿ, ಶೋಭಾ ಹಬೀಬ, ಗಂಗೂ ಜಡಿ, ಶಕುಂತಲಾಬಾಯಿ ನಿರಂಜನ, ರೇಣುಕಾ ಪವಾರ, ದುರ್ಗಾ ಕಲಬುರ್ಗಿ, ಭಾಗ್ಯಾ ಜಡಿ, ಶ್ರೀನಿವಾಸ ರತನ, ವೆಂಕಟೇಶ ಪೂಜಾರಿ, ಪ್ರಕಾಶ ಬುರುಬುರೆ ಹಾಗೂ ಇತರರು ಇದ್ದರು.