ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಿನ್ನೆಲೆಯಲ್ಲಿ ನಿರ್ಮಿಸಲಾದ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಹದಿನೈದು ಅಡಿಗಿಂತಲೂ ಎತ್ತರವಾದ ತಡೆಗೋಡೆ ನಿರ್ಮಾಣದ ಸಮಯದಲ್ಲಿಯೇ ಸ್ಥಳೀಯರು ತಡೆಗೋಡೆಯ ಗುಣಮಟ್ಟದ ಬಗ್ಗೆ ಸಂದೇಹ ವ್ಯಕ್ತಪಡಿಸಿ ಇಲಾಖಾಧಿಕಾರಿಗಳ ಗಮನ ಸೆಳೆದಿದ್ದರು. ಆ ವೇಳೆ ತಂತ್ರಜ್ಞರಿಂದ ಅನುಮೋದನೆ ಪಡೆದ ರೀತಿಯಲ್ಲೇ ತಡೆಗೋಡೆಗಳ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಲಾಗಿತ್ತು. ಇದೀಗ ಕಾಮಗಾರಿ ನಡೆದು ವರ್ಷವೇ ಕಳೆದಿಲ್ಲ. ಅದಾಗಲೇ ತಡೆಗೋಡೆಯ ಮಧ್ಯಭಾಗದಲ್ಲೇ ಬಿರುಕು ಕಾಣಿಸಿಕೊಂಡಿದೆ.
ಇದೇ ಭಾಗದ ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಇದೇ ರೀತಿ ನಿರ್ಮಾಣವಾದ ತಡೆಗೋಡೆ ಎರಡು ವರ್ಷಗಳ ಹಿಂದೆ ಬುಡದಿಂದಲೇ ಮಗುಚಿ ಬಿದ್ದಿದ್ದು, ಮಗುಚಿ ಬಿದ್ದ ಸ್ಥಳವು ಜನ ಸಂಚಾರವಿಲ್ಲದ ಸ್ಥಳವಾಗಿದ್ದರಿಂದ ಮತ್ತು ಅದು ಕೃಷಿಭೂಮಿಯಾಗಿದ್ದರಿಂದ ಅಲ್ಲಿ ಯಾವುದೇ ಜೀವ ಹಾನಿಯುಂಟಾಗಿರಲಿಲ್ಲ. ಆದರೆ ಇದೀಗ ಬಿರುಕು ಕಾಣಿಸಿಕೊಂಡ ತಡೆಗೋಡೆಯು ಶಾಲಾ ರಸ್ತೆಯ ಪಾಶ್ವೃರ್ದಲ್ಲಿರುವುದರಿಂದ ಮತ್ತೆ ಅದೇ ರೀತಿ ಮಗುಚಿ ಬಿದ್ದರೆ ಊಹಿಸಲಸಾಧ್ಯವಾದ ಅನಾಹುತ ಸಂಭವಿಸಬಹುದು. ಟನಾ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಮಗಾರಿ ನಡೆದ ಕೆಲ ತಿಂಗಳಲ್ಲೇ ಈ ರೀತಿಯ ಬಿರುಕು ಕಾಣಿಸಿರುವುದು ಕಾಮಗಾರಿಯ ಗುಣಮಟ್ಟವನ್ನು ಶಂಕಿಸುವಂತೆ ಮಾಡಿದೆ. ಮುಖ್ಯವಾಗಿ ಶಾಲಾ ಮಕ್ಕಳ ಸಂಚಾರದ ರಸ್ತೆಯಲ್ಲಿರುವ ಈ ತಡೆಗೋಡೆಯ ಬಿರುಕಿನ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕು. ಜನರ ಸುರಕ್ಷತೆ ವಿಚಾರದಲ್ಲಿ ಯಾವುದನ್ನೂ ಲುವಾಗಿ ಪರಿಗಣಿಸಬೇಡಿ ಅಶೋಕ್ ಕುಮಾರ್ ರೈ ಶಾಸಕ ಮೇಲ್ನೋಟಕ್ಕೆ ಈ ಬಿರುಕು ಅಪಾಯಕಾರಿ ಸ್ಥಿತಿಯಲ್ಲಿಲ್ಲ. ಇದು ತಡೆಗೋಡೆ ನಿರ್ಮಾಣ ಹಂತದಲ್ಲಿ ಹಲಗೆ ಅಳವಡಿಸುವ ಕಾರ್ಯದಲ್ಲಿ ಉಂಟಾದ ವ್ಯತ್ಯಯದಿಂದಾಗಿ ಮೂಡಿರಬಹುದು. ಅದಾಗ್ಯೂ ಇಡೀ ಕಾಮಗಾರಿಯನ್ನು ಪರಿಶೀಲನೆಗೆ ಒಳಪಡಿಸಲಾಗುವುದು. ಮಹೇಂದ್ರ ಕುಮಾರ್ ಸಿಂಗ್ ಕೆಎನ್‌ಆರ್ ಸಂಸ್ಥೆ ಯೋಜನಾಧಿಕಾರಿ https://www.vijayavani.net/kabaddi-training-camp https://www.vijayavani.net/extensive-rain-damage-in-mulki-taluk