ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕು ಕಚೇರಿ ಎದುರಿನ ರಸ್ತೆ ಬದಿಯಲ್ಲಿ ಅನುಮತಿ ಪಡೆಯದೆ ಮತ್ತು ಸುಂಕ ಪಾವತಿಸದೆ ಏಡಿಗಳನ್ನು ಮಾರಾಟ ಮಾಡುತ್ತಿದ್ದವರಿಗೆ ಪಟ್ಟಣ ಪಂಚಾಯತಿ ದಂಡ ವಿಧಿಸುವುದರ ಜತೆಗೆ ಎಚ್ಚರಿಕೆ ನೀಡಿದೆ.
ತಾಲೂಕು ಕಚೇರಿ ಎದುರಿನ ರಸ್ತೆ ಬದಿಯಲ್ಲಿ ಏಡಿಗಳನ್ನು ಮಾರಾಟ ಮಾಡುತ್ತಿದ್ದುದ್ದನ್ನು ಗಮನಿಸಿದ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್ ಅವರ ಗಮನಕ್ಕೆ ತಂದಿದ್ದಾರೆ.
ಬಳಿಕ ಪಟ್ಟಣ ಪಂಚಾಯಿತಿ ಸಿಬ್ಬಂದಿ ಯೋಗೇಶ್‌ಕುಮಾರ್, ಪೌರ ಕಾರ್ಮಿಕರಾದ ರವಿ, ಮಾದೇವ ಹಾಗೂ ಶಂಕರ್ ಅವರನ್ನು ವ್ಯಾಪಾರ ಮಾಡುತ್ತಿದ್ದ ಸ್ಥಳಕ್ಕೆ ಕಳುಹಿಸಿ ಏಡಿಗಳ ಸಹಿತ ಮಾರಾಟ ಮಾಡುತ್ತಿದವನನ್ನು ಪಟ್ಟಣ ಪಂಚಾಯತಿ ಕಚೇರಿಗೆ ಕರೆಸಿಕೊಳ್ಳಲಾಯಿತು. ನಂತರ 500 ರೂ.ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಲಾಯಿತು ಎಂದು ಮುಖ್ಯಾಧಿಕಾರಿ ಎಸ್.ಗೋಪಿ ಮಾಹಿತಿ ನೀಡಿದರು.