ಜಿಲ್ಲೆ

ಹೃದಯಾಘಾತ ಸಂದರ್ಭದಲ್ಲಿ ಜೀವ ಉಳಿಸುವ ಪ್ರಥಮ ಚಿಕಿತ್ಸೆಯಾದ ಸಿಪಿಆರ್​ ಚಿಕಿತ್ಸೆ ತುಂಬಾ ಸಹಕಾರಿಯಾಗಿದೆ

ವಿಜಯಪುರ:ಹೃದಯಾಘಾತ ಸಂದರ್ಭದಲ್ಲಿ ಜೀವ ಉಳಿಸುವ ಪ್ರಥಮ ಚಿಕಿತ್ಸೆಯಾದ ಸಿಪಿಆರ್​ ಚಿಕಿತ್ಸೆ ತುಂಬಾ ಸಹಕಾರಿಯಾಗಿದೆ. ಎಲ್ಲರೂ ಸಿಪಿಆರ್​ ವಿಧಾನದ ತಿಳಿವಳಿಕೆ ಹೊಂದಬೇಕು ಎಂದು ವೈದ್ಯ ಡಾ. ಮಲ್ಲನಗೌಡ ಪಾಟೀಲ ಹೇಳಿದರು.

ನಗರದ ಪ್ರೇರಣಾ ಪಿಯು ಕಾಲೇಜಿನಲ್ಲಿ ಬಿ.ಎಂ. ಪಾಟೀಲ ಡೀಮ್ಡ್​ ಮಹಾವಿದ್ಯಾಲಯದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೃಹತ್​ ಸಿಪಿಆರ್​ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಂಡು ಸ್ವಯಂ ಸೇವಕರಾಗಿ ಜನರನ್ನು ಕಾಪಾಡುವ ಸೈನಿಕರಾಗಬೇಕು ಎಂದ ಅವರು, ಸದ್ಯದ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಸರಿಯಾದ ಸಮಯಕ್ಕೆ ಸಿಗದಿರುವ ಸಹಾಯ ಮತ್ತು ಸಿಪಿಆರ್​ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಅವರು ಜಾಗೃತಿ ಮೂಡಿಸಿದರು.

ವೈದ್ಯರಾದ ರಾಕೇಶ ಬಳಮಕರ, ಯಲಗೂರಸ್ವಾಮಿ ಕೋಲಕರ, ಪರೀತ ಕೋಟಿ, ಅನಿಲ ಸಜ್ಜನ, ಜೆ. ಪ್ರಕಾಶ, ಶ್ರೀಧರ ಕೋನೇರು, ಮಾನಸಿ ಸಾಳುಂಕೆ, ನಾಗಾರ್ಜುನ ಸಿ.ಎಸ್​., ಮಹೇಶ ಕುಸುರಿ ಮತ್ತಿತರರಿದ್ದರು.

ವಿಜಯಪುರದ ಪ್ರೇರಣಾ ಪಿಯು ಕಾಲೇಜಿನಲ್ಲಿ ಬೃಹತ್​ ಸಿಪಿಆರ್​ ಜಾಗೃತಿ ಕಾರ್ಯಕ್ರಮ ನಡೆಯಿತು. ಡಾ. ಮಲ್ಲನಗೌಡ ಪಾಟೀಲ, ಮಾನಸಿ ಸಾಳುಂಕೆ, ರಾಕೇಶ ಬಳಮಕರ ಮತ್ತಿತರರಿದ್ದಾರೆ.