ಜಿಲ್ಲೆ

ಜನಪರ ಯೋಜನೆಗಳ ಅನದಾನ ಕಡಿತ ಮಾಡಿರುವುದ ಖಂಡನೀಯ

ಬೆಳಗಾವಿ : ದುಡಿಯುವ ಜನರ ವೇತನ ದ್ವಿಗುಣವಾಗದೇ ಇದ್ದರೂ ಬೆಲೆ ಏರಿಕೆ ಮಾತ್ರ ದುಪ್ಪಟ್ಟು ಆಗಿದೆ. ಜನರು ಕೊಂಡು ಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾರೆ.
ಬೆಲೆ ಏರಿಕೆ ಬೆಂಕಿಯಲ್ಲಿ ಬೆಂದು ಹೋದ ಜನರಿಗೆ ಬಜೆಟ್ ಮಂಡನೆ ಮಾಡುವಾಗ ಅವರ ಬವಣೆಗಳನ್ನು ನಿವಾರಿಸಬೇಕಾಗಿದ್ದ ಕೇಂದ್ರ ಸರ್ಕಾರ ಇನ್ನಷ್ಟು ತೊಂದರೆಯಲ್ಲಿ ಬಡವರನ್ನು ಸಿಲುಕಿಸುವ- ಬಂಡವಾಳ ಶಾಹಿಗಳ ಪರವಾಗಿ ಬಜೆಟ್ ಮಂಡಿಸಿದ್ದಾರೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, ಗ್ರಾಮೀಣ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ಕೋಡಬೇಕಿದ್ದ ಕೇಂದ್ರ ಸರ್ಕಾರ ಈ ಸಲ ಮತ್ತೆ ಬಜೆಟ್ ನಲ್ಲಿ ಅನುದಾನ ಕಡಿತ ಮಾಡಿ ಗ್ರಾಮೀಣ ಭಾಗದಲ್ಲಿ ದುಡಿಯುವ ಜನರ ಉದ್ಯೋಗ (ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಕಸಿದುಕೊಳ್ಳುವ ಕುತಂತ್ರ ನಡೆಸಿದೆ. ರೇಶನ್ (ಆಹಾರ)ಗೆ ಕೊಡುವ ಅನುದಾನ ಕಡಿತ ಮಾಡಿ ಬಡವರ ಬಾಯಿಂದ ಅನ್ನ ಕಸಿದುಕೊಂಡ ಸರ್ಕಾರದ ನೀತಿ ಖಂಡನೀಯ ಎಂದರು.

ಪ್ರತಿಭಟನಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಿ.ಎಂ.ಜೈನೆಖಾನ  ಮಾತನಾಡಿ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿಗೆ ಕೋಡುವ ಅನುದಾನವನ್ನು ಕಡಿತ ಮಾಡಿ ಕೇಂದ್ರ ಸರ್ಕಾರ ಜನವಿರೋಧಿ ಬಜೆಟ್ ಮಂಡಿಸಿದೆ. ಬಕರ್ನಾಟಕ ಸರ್ಕಾರ ಚುನಾವಣೆ ವರ್ಷದಲ್ಲಿ ಲೇಖಾನುದಾನ ಮಂಡನೆಯ ಬದಲಿಗೆ ಪೂರ್ಣ ಬಜೆಟ್
ಮಂಡಿಸಿದೆ. ಇದು ಪೂರ್ತಿಯಾಗಿ ಕೋಮುವಾದಿ ನೆಲೆಗಟ್ಟಿನ ಬಜೆಟ್ ಆಗಿದೆ. ನಿವ್ವಳ ಹಂಚಿಕೆಯ ಪ್ರಮಾಣದಲ್ಲಿ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ, ಆಹಾರ ಮತ್ತು ನಾಗರಿಕ ಸರಬರಾಜು ಮುಂತಾದ ವಲಯಗಳನ್ನು ನೋಡಿದರೆ ಅನುದಾನ ಕಡಿಮೆಯಾಗಿದೆ. ಆದರೆ ಮಠಗಳಿಗೆ ಮತ್ತು ಕೋಮುವಾದಕ್ಕೆ ಪ್ರಚೋದನೆ ನೀಡುವ ಸೂಕ್ಷ್ಮ ಸ್ಥಳಗಳಿಗೆ ಅಪಾರವಾದ ಹಣವನ್ನ ನೀಡಲಾಗಿದೆ. ಈ ರೀತಿ ಜನವಿರೋಧಿ ಬಜೆಟ್ ಮಂಡಿಸಿದ ಡಬಲ್ ಇಂಜಿನ್ ಸರ್ಕಾರಗಳ ನೀತಿಯನ್ನ CPI(M) ಬೆಳಗಾವಿ ಜಿಲ್ಲಾ ಸಮಿತಿ ಖಂಡಿಸುತ್ತದೆ. ಕೂಡಲೇ ಈ ಕೆಳಗಿನ ಬೇಡಿಕೆಗಳನ್ನು ಇತ್ಯರ್ಥ ಪಡಿಸುವ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.‌

ಈ ಸಂದರ್ಭದಲ್ಲಿ ಜಿ.ವಿ.ಕುಲಕರ್ಣಿ, ಸಿ.ಎ.ಕರಾಡೆ, ಎಲ್.ಎಸ್.ನಾಯಕ,  ಎಫ್.ಎಂ.ನದಾಫ್,  ಎನ್.ಎಲ್.ಸಂಗೊಳ್ಳಿ, ದಿಲೀಪ್ ವಾರ್ಕೆ, ನಿವಾಸ ಖೋತ,  ಪರವಿನ್ ನಾಯಕವಾಡಿ, ದೊಡ್ಡವ್ವ ಪೂಜಾರಿ ಹಾಗೂ ಮಂದಾ ನೇವಗಿ ಸೇರಿದಂತೆ ಇತರರು ಇದ್ದರು