raichur 
ಜಿಲ್ಲೆ

ಬೆಲೆ ಏರಿಕೆ ಖಂಡೀಸಿ ಸಿಪಿಐ(ಎಂ) ಪದಾಽಕಾರಿಗಳ ಪ್ರತಿಭಟನೆ

Raichur - Reporter - Rachhai Swamy

 ರಾಯಚೂರು ಕೇಂದ್ರ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ಹಾಗೂ ವಕ್ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಸಿಪಿಐ(ಎಂ) ಸಂಘದ ಪದಾಽಕಾರಿಗಳು ಸೋಮವಾರ ತಹಸೀಲ್ದಾರ್ ಕಚೇರಿ ಅಽಕಾರಿ ಪುಷ್ಪ ಅವರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರವು ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಬರೆ ಎಳೆದಿದೆ. ಬೆಲೆ ಏರಿಕೆಯು ಸಾಮಾನ್ಯ, ಬಡ ಮತ್ತು ಮಧ್ಯಮ ವರ್ಗದವರಿಗೆ ಜೀವನ ದೂಡುವುದು ಕಷ್ಟಕರವಾಗಿದೆ ಎಂದರು. ಪೆಟ್ರೋಲ್ ಮತ್ತು ಡಿಸೇಲ್ ಎರಡರ ಮೇಲೆ ರೂ.೩೨,೦೦೦ ಕೋಟಿಯಷ್ಟು ಅಂಬಕಾರಿ ಸುಂಕವನ್ನು ಹೆಚ್ಚಳ

ಮಾಡಲಾಗಿದೆ ಎಂದು ದೂರಿದರು.

ಹಣದುಬ್ಬರದಿಂದಾಗಿ ಈಗಾಗಲೇ ಜನರ ಜೀವನವು ಕಷ್ಟದಲ್ಲಿದೆ, ಇದೀಗ ಸಿಲಿಂಡರ್ ಬೆಲೆ ಏರಿಕೆಯಿಂದ ಜನತೆಯ ಬದುಕು ಮತ್ತಷ್ಟು ಕಷ್ಟಕ್ಕೆ ಈಡಾಗಲಿದೆ. ತೈಲ ಮತ್ತು ಅನಿಲದ ಅಂತರಾಷ್ಟ್ರೀಯ ಬೆಲೆ ಕುಸಿತದ ಲಾಭವನ್ನು ಜನರಿಗೆ ಮಾಡುವ ಬದಲು ಸರ್ಕಾರವು ಆ ಲಾಭವನ್ನು ತಾನು ಪಡೆದು ಜನರಿಗೆ ಇಷ್ಟು ಹೆಚ್ಚುವರಿ ಬೆಲೆ ಏರಿಕೆಯ ಹೊರೆಯನ್ನು ಹಾಕುತಿದೆ ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಉದಾರವಾದಿ ನೀತಿಗಳನ್ನು ವೇಗವಾಗಿ ಜಾರಿ ಮಾಡುವಲ್ಲಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನವಿರೋಽ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಬಿಜೆಪಿ, ಕಾಂಗ್ರೇಸ್ ಎರಡು ಪಕ್ಷಗಳು ಪರಸ್ಪರ ಬೆಲೆ ಏರಿಕೆಯ ಬಗ್ಗೆ ಕೆಸರೇರಾಟದಲ್ಲಿ ತಲೀನವಾಗಿದೆ. ಮತ್ತು ಜನತೆಯ ಹಿತವನ್ನು ಮೂಲೆ ಗುಂಪು ಮಾಡುತ್ತಿರುವುದನ್ನು ಖಂಡಿಸಿದರು. ಬೆಲೆ ಏರಿಕೆಗಳನ್ನು ಕೂಡಲೇ ವಾಪಾಸ್ಸು ಪಡೆಯಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ, ಡಿ.ಎಸ್. ಶರಣ ಬಸವ, ಎಚ್. ಪದ್ಮಾ, ನರಸಿಂಹ, ಹುಲಿಗೆಪ್ಪ, ಅಂಜಿನೇಯ್ಯ, ಲಕ್ಷ÷್ಮಣ, ಗೋಕರಮ್ಮ, ಇಂದಿರಾ, ಚಂದ್ರಕಲಾ, ಅಂಜಿನಮ್ಮ, ಬೀಮಪ್ಪ, ಮಲ್ಲಿಕಾರ್ಜುನ, ವಿಜಯಲಕ್ಷ್ಮಿ, ಮೈರುನ್ ಹುನೀಸಾ ಸೇರಿ ಅನೇಕರು ಇದ್ದರು.