ಹರಪನಹಳ್ಳಿ: ತುಮಕೂರಿನಲ್ಲಿ ವಕೀಲನ ಮೇಲೆ ಸಿಪಿಐ ಹಲ್ಲೆ ಖಂಡಿಸಿ ವಕೀಲರ ಸಂಘ ಸೋಮವಾರ ಉಪ ತಹಸೀಲ್ದಾರ್ ನಟರಾಜ್‌ಗೆ ಮನವಿ ಸಲ್ಲಿಸಿತು.
ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಮಾತನಾಡಿ, ರೈಲ್ವೆ ಇಲಾಖೆಯು ಅನಧಿಕೃತವಾಗಿ ಜಮೀನು ಸ್ವಾಧೀನ ಪಡಿಸಿಕೊಂಡಿರುವುದನ್ನು ಪ್ರಶ್ನಿಸಿದ್ದಕ್ಕೆ ವಕೀಲ ರವಿಕುಮಾರ್ ಹಾಗೂ ಅವರ ತಂದೆ ಮೇಲೆ ಸಿಪಿಐ ದಿನೇಶ್ ಕುಮಾರ್ ಮನಬಂದಂತೆ ಹಲ್ಲೆ ನಡೆಸಿದ್ದು ಖಂಡನೀಯ.
ಸಿಪಿಐ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಕೀಲರಾದ ಕಂಡ್ಯೆಪ್ಪ ಕೆ, ಪ್ರಭಾಕರ್ ಎಸ್, ನಳಿನಾ ಕುಮಾರಿ, ಸಣ್ಣ ನಿಂಗನಗೌಡ, ಹುಲಿಯಪ್ಪನವರ ಬಸವರಾಜ ಇತರರಿದ್ದರು.