ಜಿಲ್ಲೆ

ನೂಜಿಬಾಳ್ತಿಲ ಅಕ್ರಮ ಜಾನುವಾರು ಸಾಗಾಟ- ಪೋಲಿಸ್ ವಶಕ್ಕೆ

Mangaluru - Nishantha Narayana

ಕಡಬ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿ ಪಿಕಪ್ ಒಂದರಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕಡಬ ಪೋಲಿಸರು ಜಾನುವಾರು ಹಾಗೂ ಸಾಗಾಟಕ್ಕೆ ಬಳಸಿದ ಪಿಕಪ್ ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಕಪ್ ವಾಹನದಲ್ಲಿ ಒಂದು ಕರು,ಒಂದು ದನ ಇದ್ದು, ಉದನೆಯಿಂದ - ಶಿರಾಡಿ ಕಡೆಗೆ ಹೊಗುತ್ತಿತ್ತು, ಕಲ್ಲುಗುಡ್ಡೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪರವಾನಿಗೆ ಪತ್ರದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.