ಜಿಲ್ಲೆ

ಕಳ್ಳರಿಂದ ದನಗಳ ರಕ್ಷಣೆಗೆ ದೈವ, ದೇವರಿಗೆ ಮೊರೆ

Dakshina Kannada

ಮೂಡುಬಿದಿರೆ: ದನ ಕಳ್ಳರ ಹಾವಳಿಯಿಂದ ರೋಸಿ ಹೋಗಿರುವ ಮಾಂಟ್ರಾಡಿ ಗ್ರಾಮದ ಪೆಂಚಾರಿನ ಗ್ರಾಮಸ್ಥರೊಬ್ಬರು ದೈವ, ದೇವರಿಗೆ ಮೊರೆ ಹೋಗಿದ್ದಾರೆ.

ನೆಲ್ಲಿಕಾರು ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚೆಗೆ ದನಗಳ್ಳತನ ಹೆಚ್ಚಾಗಿದ್ದು, ಇದರಿಂದ ರೋಸಿ ಹೋಗಿರುವ ಗ್ರಾಮಸ್ಥರೊಬ್ಬರು ಪೆಂಚಾರುವಿನಲ್ಲಿ ಫ್ಲೆಕ್ಸ್ ಒಂದನ್ನು ಮರದಲ್ಲಿ ನೇತಾಡಿಸಿರುವುದು ಗಮನಸೆಳೆದಿದೆ. ‘ಕೆಲವು ದಿನಗಳ ಹಿಂದೆ ನಮ್ಮ ಮನೆಯ ಮೂರು ದನಗಳು ಕಾಣೆಯಾಗಿದ್ದು, ಗ್ರಾಮದಲ್ಲಿ ದನಕಳ್ಳರ ಹಾವಳಿ ಜಾಸ್ತಿ ಇದ್ದು, ದನ ಕಳ್ಳತನ ಮಾಡಿದವರ ಮೇಲೆ ಧರ್ಮಸ್ಥಳ, ಮಾರಣಕಟ್ಟೆ, ಪಣೋಲಿಬೈಲು, ಕೊರಗಜ್ಜ ಮತ್ತು ಊರ ಕುಕ್ಕಿಂತಾಯ, ಕೊಡಮಣಿತ್ತಾಯ, ದೈವ ದೇವರಿಗೆ ಹರಕೆ ಹೊತ್ತಿದ್ದು, ಕಳ್ಳರು ಹುಚ್ಚರಂತೆ ತಿರುಗಬೇಕು ಎಂದು ದೇವರ ಮೊರೆ ಹೋಗಿರುತ್ತೇವೆ-ನೊಂದ ದನಗಳ ಯಾಜಮಾನರು’ ಎಂದು ಫ್ಲೆಕ್ಸ್‌ನಲ್ಲಿ ಮುದ್ರಿಸಲಾಗಿದೆ. ಕಳವಾದ ದನದ ಚಿತ್ರವನ್ನು ಕೂಡ ಪ್ರಕಟಿಸಲಾಗಿದೆ.