ಜಿಲ್ಲೆ

ಮಾಂಸ ಮಾಡುವ ಉದ್ದೇಶದಿಂದ ಕಟ್ಟಿಹಾಕಲಾದ ದನಗಳ ರಕ್ಷಣೆ, ಆರೋಪಿ ವಶಕ್ಕೆ

Udupi

ಬೆಳ್ಮಣ್: ಮಾಂಸ ಮಾಡುವ ಉದ್ದೇಶದಿಂದ ಕಟ್ಟಿಹಾಕಲಾದ ದನಗಳ ಸಹಿತ ಮಾಂಸವನ್ನು ವಶಪಡಿಸಿಕೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯ ಎಂಬಲ್ಲಿ ನಡೆದಿದೆ.

ಮುಂಡ್ಕೂರು ಗ್ರಾಮದ ಸಂಕಲಕರಿಯ ಎಂಬಲ್ಲಿ ರಹಿಂ ಎಂಬುವರ ಮನೆ ಸಮೀಪ ಮಾಂಸ ಮಾಡಲೆಂದು ಕಟ್ಟಿ ಹಾಕಲಾಗಿದ್ದ ದನಗಳನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ಈ ಸಂದರ್ಭ ಮಾಂಸ ಮಾಡುವ ಉದ್ದೇಶದಿಂದ ಕಟ್ಟಿ ಹಾಕಲಾದ 5 ದನ ಹಾಗೂ 3 ಕರುಗಳನ್ನು ರಕ್ಷಿಸಲಾಗಿದೆ. ಹಾಗೂ ಸುಮಾರು 25 ಕೆ.ಜಿ. ದನದ ಮಾಂಸ ಕೂಡ ಪತ್ತೆಯಾಗಿದ್ದು ಆರೋಪಿ ರಹೀಂನನ್ನು ವಶಕ್ಕೆ ಪಡೆಯಲಾಗಿದೆ.

ರಕ್ಷಿಸಲಾದ ದನಗಳನ್ನು ಗೋಶಾಲೆಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.