ಜಿಲ್ಲೆ

ಕಲಬುರಗಿಯಲ್ಲಿ ಗೋರಕ್ಷಣೆಗೆ ಹೊರಟವರ ಬಂಧನ, ಲಾಠಿ ಚಾರ್ಜ್​

ರಮೇಶ ಮೇಳಕುಂದಾ

ಕಲಬುರಗಿ: ಬಕ್ರೀದ್​ ನಿಮಿತ್ತ ಜಿಲ್ಲಾಡಳಿತ ವೈಫಲ್ಯದಿಂದಾಗಿ ನಗರಕ್ಕೆ ಬಂದಿರುವ ಸಾವಿರಾರು ಗೋವುಗಳನ್ನು ರಕ್ಷಿಸಲು ಶುಕ್ರವಾರ ಸಂಜೆ ಕಸಾಯಿಖಾನೆಗೆ ಹೊರಟಿದ್ದ ವಿಶ್ವ ಹಿಂದು ಪರಿಷತ್​, ಬಜರಂಗದಳ ಕರ‍್ಯರ‍್ತರ ಮೇಲೆ ಲು ಲಾಠಿ ಪ್ರಹಾರ ನಡೆಸಿ ಬಂಧಿಸಲಾಗಿದೆ.

ಜಗತ್​ ವೃತ್ತದಲ್ಲಿ ಜಮಾಯಿಸಿದ ನೂರಾರು ಹಿಂದು ಕರ‍್ಯರ‍್ತರು ಎಸ್​ಟಿಬಿಟಿ ಮರ‍್ಗವಾಗಿ ಕಸಾಯಿಖಾನೆ ಪರಿಸರದಲ್ಲಿ ಕಟ್ಟಿ ಹಾಕಿದ್ದ ಗೋವುಗಳನ್ನು ರಕ್ಷಿಸುತ್ತೇವೆ ಎಂದು ಜೈಶ್ರೀರಾಮ, ಜೈ ಗೋಮಾತೆ ಜೈಕಾರ ಮೊಳಗಿಸುತ್ತ ಮುಂದಡಿ ಇಟ್ಟರು.

ಬಕ್ರೀದ್​ ಹಿನ್ನೆಲೆಯಲ್ಲಿ ಗೋವುಗಳ ಸಾಗಣೆ ನಿರಂತರ ನಡೆದಿದೆ. ಹಲವು ಬಾರಿಗೆ ಪತ್ರಿಕಾಗೋಷ್ಠಿ, ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರೂ ಜಿಲ್ಲಾಡಳಿತ ಬರೀ ಹೇಳಿಕೆಗಳನ್ನು ನೀಡುತ್ತಿದೆ ಹೊರತು, ಯಾವುದೇ ನ್ಯಾಯ ಕಲ್ಪಿಸುತ್ತಿಲ್ಲ. ಗೋವುಗಳನ್ನು ರಾಜಾರೋಷವಾಗಿ ವಧೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು, ಪಶು ಸಂಗೋಪನಾ ಇಲಾಖೆ ಸೇರಿ ಇಡೀ ಜಿಲ್ಲಾಡಳಿತ ಸರಿಯಾಗಿ ಕರ‍್ಯನರ‍್ವಹಿಸುತ್ತಿಲ್ಲ. ನಗರದ ಎಲ್ಲೂ ನಾಕಾಬಂದಿ ಮಾಡಿಲ್ಲ. ಬೇಕಾಬಿಟ್ಟಿ ಮಾಡಿದ್ದರಿಂದಲೇ ಸಾವಿರಾರು ಗೋವುಗಳು ನಗರ ಪ್ರವೇಶಿಸಿವೆ. ಅವುಗಳನ್ನು ಕೂಡಲೇ ರಸಿ ಗೋ ಶಾಲೆಗಳಿಗೆ ಸಾಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಡಳಿತ ಗೋವುಗಳ ರಕ್ಷಣೆಯಲ್ಲಿ ಸಂಪರ‍್ಣ ವಿಲವಾಗಿದ್ದು, ನಾವೇ ಸ್ವತ@ ಕಸಾಯಿಖಾನೆಗಳಿಗೆ ತೆರಳಿ ವಧೆ ಮಾಡುವವರಿಗೆ ಕಾನೂನಿನ ಅರಿವು ಮೂಡಿಸಿ ಗೋವುಗಳನ್ನು ರಕ್ಷಿಸುವುದಾಗಿ ಹೊರಟಿದ್ದ ಕರ‍್ಯರ‍್ತರನ್ನು ಮರ‍್ಗಮಧ್ಯೆ ತಡೆದ ಪೊಲೀಸರು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​ ಸೇರಿ ಪ್ರಮುಖ ಹಿಂದು ಕರ‍್ಯರ‍್ತರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು. ಅಲ್ಲದೆ ಲಾಠಿ ಪ್ರಹಾರ ನಡೆಸಿ ಹೋರಾಟಗಾರರ ಬಟ್ಟೆ ಹಿಡಿದು ಎಳೆದಾಡಿದರು. ಕೆಲವರು ಹಿಂದು ಕರ‍್ಯರ‍್ತರನ್ನು ಬೆದರಿಸಿ ಪ್ರತಿಭಟನೆ ಹಿಂಪಡೆಯುವಂತೆ ಸೂಚಿಸಿದರು. ಕೆಲ ಕರ‍್ಯರ‍್ತರು ತಡರಾತ್ರಿವರೆಗೆ ಜಗತ್​ ವೃತ್ತದಲ್ಲೇ ಠಿಕಾಣಿ ಹೂಡಿ ಗೋವುಗಳನ್ನು ರಸಬೇಕು ಎಂದು ಆಗ್ರಹಿಸಿದರು.

ಚಂದು ಪಾಟೀಲ್​ ಸೇರಿ ಹಲವರ ಬಂಧನ ಬಿಡುಗಡೆ: ಹಲವು ಬಾರಿ ಮನವಿ ಮಾಡಿದರೂ ಗೋ ವಧೆ ತಡೆಯುವಲ್ಲಿ ಜಿಲ್ಲಾಡಳಿತ ವಿಲವಾಗಿದೆ. ಹೀಗಾಗಿ ನಾವೇ ಕಸಾಯಿಖಾನೆಗಳಿಗೆ ತೆರಳಿ ಗೋವುಗಳನ್ನು ರಸುತ್ತೇವೆ ಎಂದು ಜೈಕಾರ ಮೊಳಗಿಸುತ್ತ ಹೋಗುತ್ತಿದ್ದ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​, ವಿಶ್ವ ಹಿಂದು ಪರಿಷತ್​, ಬಜರಂಗದಳ ಕರ‍್ಯರ‍್ತರು, ಪ್ರಮುಖರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಗೋವುಗಳ ರಕ್ಷಣೆ ಮಾಡಬೇಕು ಎಂದು ವಿಎಚ್​ಪಿ, ಬಜರಂಗದಳ ಸೇರಿ ಹಿಂದುಪರ ಸಂಟನೆಗಳು ಹಲವು ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತ ಗೋಸಾಗಣೆ ತಡೆದಿಲ್ಲ. ಆದ್ದರಿಂದ ಕಸಾಯಿಖಾನೆಗಳಿಗೆ ಸ್ವತ@ ನಾವೇ ಭೇಟಿ ನೀಡಿ ಅಲ್ಲಿನವರಿಗೆ ಕಾನೂನಿನ ಅರಿವು ಮೂಡಿಸಿ ಗೋ ವಧೆ ತಪ್ಪು ಎಂದು ಮನವರಿಕೆ ಮಾಡಿ ರಕ್ಷಣೆಗೆ ಹೊರಟಿದ್ದೆವು. ಆದರೆ ಪೊಲೀಸರು ತಡೆದಿದ್ದಾರೆ. ನಮ್ಮ ಬದಲು ಗೋ ವಧೆ ತಡೆಯಲು ಪೊಲೀಸರು, ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ. | ಚಂದು ಪಾಟೀಲ್​ ಮಹಾನಗರ ಜಿಲ್ಲಾಧ್ಯಕ್ಷ, ಬಿಜೆಪಿ