ಹುಬ್ಬಳ್ಳಿ: ಆತ ವನವಾಸ ಮಾಡಿದ ರಾಮನಲ್ಲ. ತನಗೆ ಅದು ಬೇಕು-ಇದು ಬೇಕು ಎಂದು ಹಂಬಲಿಸುವ ಮನುಷ್ಯ ಜೀವಿಯಂತೂ ಅಲ್ಲವೇ ಅಲ್ಲ. ಆದರೆ ತನ್ನ ಜೀವನವನ್ನೇ ಒಂದು ಕುಟುಂಬಕ್ಕಾಗಿ ಶ್ರಮಿಸಿದ ನಿಸ್ವಾರ್ಥ ಜೀವಿ ಈ ರಾಮ. ಅವನ ಅಗಲಿಕೆಗೆ ಕುಟುಂಬ ಮಾತ್ರವಲ್ಲದೆ ಊರಿಗೆ ಊರೇ ಕಂಬನಿ ಮಿಡಿದಿದೆ. ಹಾಗಿದ್ದರೆ ಯಾರು ಆ ರಾಮ? ಅಲ್ಲಿ ಆಗಿದ್ದಾದರೂ ಏನು ಅಂತೀರಾ? ಈ ಸ್ಟೋರಿ ಓದಿ.
ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ರೈತ ಅಶೋಕ ಗಾಮನಗಟ್ಟಿ ಕುಟುಂಬವು ತನ್ನ ಮನೆಯಲ್ಲಿ 1994ರ ಜುಲೈ 12ರಂದು ಜನಸಿದ ಎತ್ತಿಗೆ ರಾಮ ಎಂದು ನಾಮಕರಣ ಮಾಡಿ ಮಗನಂತೆ ಜೋಪಾನ ಮಾಡಿದ್ದರು. ಪ್ರತಿವರ್ಷ ರಾಮನ ಹುಟ್ಟುಹಬ್ಬದಂದು ಕೇಕ್ ಕತ್ತರಿಸಿ ಆರತಿ ಬೆಳಗುವ ಮೂಲಕ ಮನೆಯ ಸದಸ್ಯರಲ್ಲಿ ಒಬ್ಬನಂತೆ ನೋಡುತ್ತಿದ್ದರು. ಇದನ್ನೂ ಓದಿರಿ ಪ್ಲೀಸ್ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!
ಮೂಕ ಪ್ರಾಣಿಯ ಜೊತೆಗೆ ಈ ಕುಟುಂಬ ಉತ್ತಮ ಬಾಂಧವ್ಯ ಹೊಂದಿತ್ತು. ದಿನದ 24 ಗಂಟೆಯೂ ರಾಮನೊಂದಿಗೆ ಒಡನಾಟ ಹೊಂದಿದ್ದ ಅಶೋಕ ಗಾಮನಗಟ್ಟಿ ಕುಟುಂಬ ರಾಮನಿಲ್ಲದೆ ಅನಾಥಭಾವದಲ್ಲಿ ಕಣ್ಣೀರು ಹಾಕಿದೆ. ರಾಮನ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತೇ ಹುಟ್ಟಿ ಬಾ ರಾಮ ಎಂದು ಗ್ರಾಮಸ್ಥರು ರಾಮನಿಗೆ ವಿದಾಯ ಹೇಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. (ದಿಗ್ವಿಜಯ ನ್ಯೂಸ್)