ಜಿಲ್ಲೆ

ಗೋಸಂರಕ್ಷಣೆಗೆ 51 ಲಕ್ಷ ದೇಣಿಗೆ ನೀಡಿದ ಮಹೇಂದ್ರ ಮುಣೋತ್

ಬೆಂಗಳೂರು: ಗೋವು ನಮ್ಮ ಸನಾತನ ಪರಂಪರೆಯ ದೈವೀಮೂರ್ತಿಯಾಗಿದ್ದು, ಗೋರಕ್ಷಣೆಯ ಮೂಲಕ ಹೆತ್ತ ತಂದೆ-ತಾಯಿಗಳ ಸೇವೆ ಮಾಡಿದ ಪುಣ್ಯ ಪಡೆಯಬಹುದು ಎಂದು ಗೋಪ್ರೇಮಿ, ವಿಜಯನಗರದ ಮಾರುತಿ ಮೆಡಿಕಲ್ಸ್ ಮಾಲೀಕ ಮಹೇಂದ್ರ ಮುಣೋತ್ ಅಭಿಪ್ರಾಯಿಸಿದ್ದಾರೆ.

ಬುಧವಾರ ಕನಕಪುರ ರಸ್ತೆಯ ದಿಣ್ಣೆಪಾಳ್ಯದಲ್ಲಿರುವ ಅಮೃತಧಾರ ಗೋಶಾಲೆಯಲ್ಲಿ ಹಮ್ಮಿಕೊಂಡಿದ್ದ ಗೋಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ತಾಯಿಯ ಋಣವನ್ನು ತೀರಿಸಲು ಅಸಾಧ್ಯ ಆದರೆ ತಾಯಿಂತೆ ನಮ್ಮನ್ನು ಪೊರೆಯುವ ಗೋಮಾತೆಯ ಋಣವನ್ನು ತೀರಿಸಲು ಖಂಡಿತಾ ಸಾಧ್ಯ. ಗೋವು ನಮ್ಮ ಸನಾತನ ಪರಂಪರೆಯ ದೈವೀಮೂರ್ತಿ ಮಾತ್ರವಲ್ಲ ಒಂದು ರೀತಿಯ ಪಾಪನಾಶಿನಿ. ಅಲ್ಲದೇ ಭಾರತೀಯ ಕೃಷಿ ವ್ಯವಸ್ಥೆಯಲ್ಲಿ ರೈತನ ಬಂಧು. ಅಂತಹ ಗೋವನ್ನು ಉಳಿಸಿದರೆ ಕೇವಲ ಗ್ರಾಮ ಮಾತ್ರವಲ್ಲ ಇಡೀ ದೇಶ ಸಮೃದ್ಧಿಯಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.

ಪ್ರತಿವರ್ಷ ತಮ್ಮ ತಂದೆ-ತಾಯಿ ಸ್ಮರಣಾರ್ಹ ಅಕ್ರಮ ಸಾಗಾಟದಿಂದ ರಕ್ಷಿಸಲ್ಪಟ್ಟ ಗೋವುಗಳ ಪಾಲನೆಗಾಗಿ ದೇಣಿಗೆ ನೀಡುತ್ತಾ ಬಂದಿರುವ ಮಹೇಂದ್ರ ಅವರು ಈ ಬಾರಿ 20ಕ್ಕೂ ಹೆಚ್ಚು ಗೋಶಾಲೆಯ ಮುಖ್ಯಸರಿಗೆ 51 ಲಕ್ಷದ ಚೆಕ್ ವಿತರಿಸಿದರು.

ಪತಿಯ ಗೋಸೇವಾ ಕಾರ್ಯದಲ್ಲಿ ಪತ್ನಿ ಸುರಕ್ಷಾ ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ಇದೇ ವೇಳೆ ಗೋಶಾಲೆಯಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಗೋಪೂಜೆಯನ್ನು ಮಾಡಲಾಯಿತು.